ನಿಧಾನವಾಗಿ ಕಿರಿದುಗೊಳ್ಳುತ್ತಿರುವ ಚಂದ್ರ: ‘ನಾಸಾ’ ವಿಶ್ಲೇಷಣೆ

Update: 2019-05-14 17:16 GMT

ವಾಶಿಂಗ್ಟನ್, ಮೇ 14: ಭೂಮಿಯ ಪ್ರಾಕೃತಿಕ ಉಪಗ್ರಹ ಚಂದ್ರ ನಿಧಾನವಾಗಿ ಕಿರಿದಾಗುತ್ತಿದೆ ಹಾಗೂ ಇದರಿಂದಾಗಿ ಅದರ ಮೇಲ್ಮೈಯಲ್ಲಿ ನೆರಿಗೆಗಳು ಮೂಡುತ್ತಿವೆ ಹಾಗೂ ಕಂಪನಗಳು ಸಂಭವಿಸುತ್ತಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಸೋಮವಾರ ಹೇಳಿದೆ.

ನಾಸಾದ ಚಂದ್ರ ಶೋಧಕ ನೌಕೆ ‘ಲೂನಾರ್ ರೆಕನೈಸನ್ಸ್ ಆರ್ಬಿಟರ್ (ಎಲ್‌ಆರ್‌ಒ) ಕಳುಹಿಸಿದ ಚಿತ್ರಗಳ ವಿಶ್ಲೇಷಣೆಯ ಬಳಿಕ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

12,000ಕ್ಕೂ ಅಧಿಕ ಚಿತ್ರಗಳನ್ನು ಈ ಉದ್ದೇಶಕ್ಕಾಗಿ ವಿಶ್ಲೇಷಣೆ ಮಾಡಲಾಗಿದೆ. ಚಂದ್ರನ ಉತ್ತರ ಧ್ರುವದ ಸಮೀಪದಲ್ಲಿರುವ ‘ಮೇರ್ ಫ್ರಿಗೋರಿಸ್’ ಎಂಬ ಬೇಸಿನ್ ಬಿರುಕು ಬಿಡುತ್ತಿರುವುದು ಹಾಗೂ ಸ್ಥಳಾಂತರಗೊಳ್ಳುತ್ತಿರುವುದು ಪತ್ತೆಯಾಗಿದೆ.

ಚಂದ್ರನಲ್ಲಿ ಭೂಮಿಯಲ್ಲಿರುವಂತೆ ಟೆಕ್ಟೋನಿಕ್ ಪ್ಲೇಟ್‌ಗಳಿಲ್ಲ. ಬದಲಿಗೆ, ಅದರ ಟೆಕ್ಟೋನಿಕ್ ಚಟುವಟಿಕೆಗಳು ಅದು ನಿಧಾನವಾಗಿ ಉಷ್ಣತೆಯನ್ನು ಕಳಕೊಂಡಾಗ ಆರಂಭಗೊಳ್ಳುತ್ತವೆ.

ಚಂದ್ರ 450 ಕೋಟಿ ವರ್ಷಗಳ ಹಿಂದೆ ಉಗಮಗೊಂಡಿದೆ.

ಟೆಕ್ಟೋನಿಕ್ ಚಟುವಟಿಕೆಗಳಿಂದಾಗಿ ಚಂದ್ರನ ಮೇಲ್ಮೈಯಲ್ಲಿ ನೆರಿಗೆಗಳು ಮೂಡುತ್ತವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News