ಬೆಳಪುವಿನಲ್ಲಿ ವಿದ್ಯುತ್ ಬಿಲ್ಲು ಸ್ವೀಕರಿಲು ಕಿಂಡಿ

Update: 2019-05-14 17:21 GMT

ಪಡುಬಿದ್ರಿ: ಬೆಳಪು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪ್ರತಿ ತಿಂಗಳ 16ರಂದು ಮೆಸ್ಕಾಂ ವಿದ್ಯುತ್ ಬಿಲ್ಲು ನಗದು ಸ್ವೀಕರಿಲಾಗುವುದು. 

ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 1:30 ರವರೆಗೆ ನಗದು ಕಿಂಡಿ ತೆರೆಯಲಾಗಿದ್ದು, ವಿದ್ಯುತ್ ಬಳಕೆದಾರರು ತಮ್ಮ ವಿದ್ಯುತ್ ಬಿಲ್ಲುಗಳನ್ನು ಪಾವತಿಸಲು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ. ತಿಂಗಳ 16ನೇ ದಿನಾಂಕವು ರಜಾ ದಿನಾಂಕವಾಗಿದ್ದಲ್ಲಿ ಮರುದಿನ ವಿದ್ಯುತ್ ಬಿಲ್ಲು ಮೊತ್ತವನ್ನು ಸ್ವೀಕರಿಸಲಾಗುವುದು.

ಮೇ 16ರಂದು ಬೆಳಗ್ಗೆ ಗಂಟೆ 10.30ಕ್ಕೆ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಬೆಳಪು ಗ್ರಾಮ ಪಂ. ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News