ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ರಕ್ತದಾನ ಶಿಬಿರ
Update: 2019-05-14 22:59 IST
ಬಂಟ್ವಾಳ, ಮೇ 14: ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ 102ನೇ ರಕ್ತದಾನ ಶಿಬಿರವು ಮಂಗಳವಾರ ಸೇವಾಂಜಲಿ ಸಭಾಂಗಣದಲ್ಲಿ ಜರಗಿತು.
ಕರ್ನಾಟಕ ಪೊಲೀಸ್ ಇಲಾಖೆಯ ಪ್ರಮೋದ್ ಕುಮಾರ್ ಮೂಲ್ಕಿ ಹಾಗು ಯೋಗೀಶ್ ಕುಮಾರ್ ಕುಮ್ಡೇಲು ಇವರು ಜಂಟಿಯಾಗಿ ರಕ್ತದಾನ ಮಾಡುವ ಮೂಲಕ ಈ ಶಿಬಿರವನ್ನು ಉದ್ಘಾಟಿಸಿದರು.
ಸೇವಾಂಜಲಿಯ ಆಡಳಿತ ಟ್ರಸ್ಟಿ ಶ್ರೀ ಕೃಷ್ಣ ಕುಮಾರ್ ಪೂಂಜಾ, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ರಕ್ತನಿಧಿಯ ಡಾ. ಮರಿಯ, ಸೇವಾಂಜಲಿಯ ಸೋಮಪ್ಪ ಕೋಟ್ಯಾನ್ ತುಂಬೆ, ಆರ್.ಎಸ್. ಜಯ, ಪ್ರವೀಣ್ ಕುಮಾರ್ ತುಪ್ಪೆಕಲ್ಲು, ಸುಖೇಶ್ ತೇವು, ಎಫ್. ಗಣೇಶ್ ಕುಮಾರ್, ತಿಲಕ್ ಕುಮಾರ್ ತುಪ್ಪೆಕಲ್ಲು, ದಿನೇಶ್ ಗಾಣದಕೊಟ್ಯ ಮತ್ತಿತರರು ಉಪಸ್ಥಿತರಿದ್ದರು. ಒಟ್ಟು 45 ಯುನಿಟ್‍ಗಳು ರಕ್ತ ಸಂಗ್ರಹಗೊಂಡಿತು.