ಮೇ 16ರಿಂದ ಆಗುಂಬೆ ಘಾಟಿಯಲ್ಲಿ ಲಘು ವಾಹನ ಸಂಚಾರ

Update: 2019-05-15 15:03 GMT

ಉಡುಪಿ, ಮೇ 15: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ಮೇ 16ರಿಂದ ಲಘುವಾಹನಗಳಾದ ಮಿನಿಬಸ್‌ಗಳು, ಜೀಪು, ವ್ಯಾನ್, ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ.

ರಸ್ತೆಯ ಕ್ಯೂರಿಂಗ್ ಕೆಲಸ ಸಂಪೂರ್ಣವಾಗಿ ಮುಗಿದ ನಂತರ ಜೂ.1ರಿಂದ ಮಿನಿ ಬಸ್‌ಗಳು, ಜೀಪು, ವ್ಯಾನ್, ಕಾರುಗಳು ಹಾಗೂ ದ್ವಿಚಕ್ರ ವಾಹನಗಳೊಂದಿಗೆ ಎಲ್‌ಸಿವಿ ವಾಹನಗಳಿಗೆ ಸಂಚಾರಕ್ಕೆ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.
ರಸ್ತೆಯ ಕ್ಯೂರಿಂಗ್ ಕೆಲಸ ಸಂಪೂರ್ಣವಾಗಿ ಮುಗಿದ ನಂತರ ಜೂ.1ರಿಂದ ಮಿನಿ ಬಸ್‌ಗಳು, ಜೀಪು, ವ್ಯಾನ್, ಕಾರುಗಳು ಹಾಗೂ ದ್ವಿಚಕ್ರ ವಾಹನಗಳೊಂದಿಗೆ ಎಲ್‌ಸಿವಿ ವಾಹನಗಳಿಗೆ ಸಂಚಾರಕ್ಕೆ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ. ಅಲ್ಲಿಯವರೆಗೆ ಉಡುಪಿ-ಕುಂದಾಪುರ-ಸಿದ್ದಾಪುರ-ಹೊಸಂಗಡಿ- ಮಾಸ್ತಿಕಟ್ಟೆ -ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಹಾಗೂ ಮಂಗಳೂರು-ಕಾರ್ಕಳ-ಮಾಳ ಘಾಟ್-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ (ರಾ.ಹೆದ್ದಾರಿ 169) ಮೂಲಕ ಸಂಚರಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಲ್ಲಿಯವರೆಗೆ ಉಡುಪಿ-ಕುಂದಾಪುರ-ಸಿದ್ದಾಪುರ-ಹೊಸಂಗಡಿ- ಮಾಸ್ತಿಕಟ್ಟೆ -ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಹಾಗೂ ಮಂಗಳೂರು-ಕಾರ್ಕಳ-ಮಾಳ ಘಾಟ್-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ (ರಾ.ಹೆದ್ದಾರಿ 169) ಮೂಲಕ ಸಂಚರಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News