ಪ.ಜಾತಿ, ಪಂಗಡ ವಿದ್ಯಾರ್ಥಿನಿಲಯ ಸೇರ್ಪಡೆಗೆ ಅರ್ಜಿ ಆಹ್ವಾನ

Update: 2019-05-15 15:06 GMT

ಉಡುಪಿ, ಮೇ 15: 2019-20ನೇ ಸಾಲಿಗೆ ಉಡುಪಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ವಿದ್ಯಾರ್ಥಿಗಳ ಸೇರ್ಪಡೆಗೆ ಆನ್‌ಲೈನ್ ಮೂಲಕ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.

ಪ.ಜಾತಿ ವಿದ್ಯಾರ್ಥಿ ನಿಲಯದ ವಿವರ: ಮೆಟ್ರಿಕ್ ಪೂರ್ವ ಗಂಡು ಮಕ್ಕಳ ವಸತಿ ನಿಲಯ ಕುಂಜಿಬೆಟ್ಟು, ಕೂರಾಡಿ, ಯಡ್ತಾಡಿ, ಪಡುಬಿದ್ರಿ, ಮೆಟ್ರಿಕ್ ಪೂರ್ವ ಹೆಣ್ಣು ಮಕ್ಕಳ ವಸತಿ ನಿಲಯ ಯಡ್ತಾಡಿ, ಕೂರಾಡಿ, ಕಾಪು, ಬನ್ನಂಜೆ, ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಹೆಣ್ನು ಮಕ್ಕಳ ವಸತಿ ನಿಲಯ ಉಡುಪಿ ಟೌನ್, ಮೆಟ್ರಿಕ್ ನಂತರದ ಹೆಣ್ಣು ಮಕ್ಕಳ ವಸತಿ ನಿಲಯ ಬನ್ನಂಜೆ, ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಗಂಡು ಮಕ್ಕಳ ವಸತಿ ನಿಲಯ ಬಡಗಬೆಟ್ಟು.

ಪ.ಪಂಗಡದ ವಿದ್ಯಾರ್ಥಿ ನಿಲಯದ ವಿವರ: ಮೆಟ್ರಿಕ್ ಪೂರ್ವ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ ಆದಿ ಉಡುಪಿ, ಆಶ್ರಮ ಶಾಲೆ ಬನ್ನಂಜೆ, ಮೆಟ್ರಿಕ್ ನಂತರದ ಗಂಡು ಮಕ್ಕಳ ವಸತಿ ನಿಲಯ ತೊಟ್ಟಂ, ಮೆಟ್ರಿಕ್ ನಂತರದ ಹೆಣ್ಣು ಮಕ್ಕಳ ವಸತಿ ನಿಲಯ ಉಡುಪಿ ಟೌನ್ ದೊಡ್ಡಣಗುಡ್ಡೆ.

ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆ ವೆಬ್‌ಸೈಟ್ -www.sw.kar.nic.in ಹಾಗೂ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆಯ ವೆಬ್‌ಸೈಟ್-www.tw.kar.nic.in-  -ರ ಮೂಲಕ ತೇರ್ಗಡೆ ಪ್ರಮಾಣ ಪತ್ರ, ಜಾತಿ/ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ ಹಾಗೂ ಭಾವಚಿತ್ರಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಹಾಗೂ ಆಶ್ರಮ ಶಾಲೆಗೆ ಅರ್ಜಿ ಸಲ್ಲಿಸುವವರು ಜೂ.15ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಪ್ರತಿ ಯೊಂದಿಗೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್, ಉಡುಪಿ ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0820-2528884 ಅನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News