34ನೇ ನೆಕ್ಕಿಲಾಡಿ ಗ್ರಾ.ಪಂ. ಉಪಚುನಾವಣೆ: ಮೂರು ನಾಮಪತ್ರ ಸಲ್ಲಿಕೆ

Update: 2019-05-15 16:02 GMT

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ಮೇ 29ರಂದು ಉಪಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಆರಂಭಗೊಂಡ ಎರಡು ದಿನಗಳ ಬಳಿಕ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.

34ನೇ ನೆಕ್ಕಿಲಾಡಿ ಗ್ರಾ.ಪಂ.ನ ವಾರ್ಡ್ 2 ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಇಲ್ಲಿ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಇಲ್ಲಿ ಸ್ಪರ್ಧೆ ಬಯಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅನಿ ಮಿನೇಜಸ್, ವೀಣಾ ಸಾಲ್ವಿನ್, ಮೈಮೂನಾ ಮೇ 15ರಂದು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿ ಪುತ್ತೂರು ತಾ.ಪಂ. ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ನವೀನ್ ಭಂಡಾರಿ ನಾಮಪತ್ರ ಸ್ವೀಕರಿಸಿದರು.

ಅನಿ ಮಿನೇಜಸ್: 34ನೇ ನೆಕ್ಕಿಲಾಡಿ ಗ್ರಾಮದ ತಾಳೆಹಿತ್ಲು ನಿವಾಸಿ ಫ್ರಾನ್ಸಿಸ್ ಅನಿಲ್ ಮಿನೇಜಸ್ ಅವರ ಪತ್ನಿಯಾಗಿರುವ ಅನಿ ಮಿನೇಜಸ್ ಅವರು ಕೃಷಿ ಕುಟುಂಬದವರಾಗಿದ್ದು, ಗೃಹಿಣಿಯಾಗಿದ್ದಾರೆ. `ನಮ್ಮೂರು- ನೆಕ್ಕಿಲಾಡಿ'ಯ ಕಾರ್ಯದರ್ಶಿಯಾಗಿದ್ದುಕೊಂಡು ಹಲವು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವೀಣಾ ಸಾಲ್ವಿನ್: 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಲ ನಿವಾಸಿ ಜೋನ್ ಕೆನ್ಯೂಟ್ ಅವರ ಪತ್ನಿಯಾಗಿರುವ ವೀಣಾ ಸಾಲ್ವಿನ್ ಗೃಹಿಣಿಯಾಗಿದ್ದು, ಪುತ್ತೂರು ನಂದನ ಕೋ- ಅಪರೇಟಿವ್ ಸೊಸೈಟಿಯ ನಿರ್ದೇಶಕರಾಗಿದ್ದಾರೆ.

ಮೈಮೂನ: 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ನಿವಾಸಿ ಸುಲೈಮಾನ್ ಅವರ ಪತ್ನಿಯಾಗಿರುವ ಮೈಮೂನಾ ಅವರು ಗೃಹಿಣಿಯಾಗಿದ್ದಾರೆ.

ಮೇ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂದೆಗೆದುಕೊಳ್ಳಲು ಮೇ 20 ಅಂತಿಮ ದಿನವಾಗಿದೆ. 34ನೆ ನೆಕ್ಕಿಲಾಡಿ ಗ್ರಾ.ಪಂ.ನ ವಾರ್ಡ್ 2ರ ಸದಸ್ಯರಾಗಿದ್ದ ದೇವಕಿಯವರು ಕರ್ವೇಲು ಅಂಗನವಾಡಿ ಕೇಂದ್ರದ ಸಹಾಯಕಿಯಾಗಿರುವ ಕಾರಣ ಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕಾರಣ ಈ ಉಪಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News