ಬಜೆಯಲ್ಲಿ ಮುಂದುವರಿದ ಪಂಪಿಂಗ್ ಕಾರ್ಯ, ನೀರಿನ ಮಟ್ಟ ಅಲ್ಪ ಏರಿಕೆ

Update: 2019-05-15 16:23 GMT

ಉಡುಪಿ, ಮೇ 15: ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಹಿರಿಯಡ್ಕ ಸಮೀಪದ ಬಜೆ ಅಣೆಕಟ್ಟಿನಲ್ಲಿ ನೀರಿನ ಪಂಪಿಂಗ್ ಕಾರ್ಯ ಇಂದು ಮುಂದು ವರಿದಿದೆ. ಶಿರೂರು ಅಣೆಕಟ್ಟು ಕಡೆಯಿಂದ ಡ್ರೆಡ್ಜಿಂಗ್ ನಡೆಸಿದ ಪರಿಣಾಮ ಹೊಂಡದಲ್ಲಿದ್ದ ನೀರು ಬಜೆ ಜಾಕ್‌ವೆಲ್‌ಗೆ ಹರಿದು ಬರುತಿದ್ದು, ಇದರಿಂದ ನೀರಿನ ಮಟ್ಟ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಮಂಗಳವಾರ ಬಜೆಯಲ್ಲಿ ನೀರಿನ ಮಟ್ಟ 1.80ಮೀ. ಇದ್ದಿದ್ದರೆ, ಇಂದು ಅದು 1.82ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಈಗ ಬಜೆ ಅಣೆಕಟ್ಟಿನಲ್ಲಿ ಬಿರುಸಿನ ಕಾರ್ಯಾಚರಣೆಗೆ ಇಳಿದಿದ್ದಾರೆ.

ಒಂದೆಡೆ ನಗರಸಭೆಯಿಂದ ಪಂಪಿಂಗ್ ಪ್ರಕ್ರಿಯೆ ನಡೆಯುತಿದ್ದರೆ ಮತ್ತೊಂದು ಕಡೆ ಹಿಟಾಚಿ ಮೂಲಕ ಬಂಡೆಗಳನ್ನು ತೆರವುಗೊಳಿಸಿ ನೀರಿನ ಹರಿವನ್ನು ಸರಾಗಗೊಳಿಸಲಾಗುತ್ತಿದೆ. ಇನ್ನೊಂದು ಕಡೆ ನದಿಯ ಅಲ್ಲಲ್ಲಿ ದೊಡ್ಡ ದೊಡ್ಡ ಹಳ್ಳಗಳಲ್ಲಿ ತುಂಬಿರುವ ನೀರನ್ನು ಪಂಪ್ ಮಾಡಲಾಗುತ್ತಿದೆ.

ಕಳೆದ ಐದಾರು ದಿನಗಳಿಂದ ಉಡುಪಿ ಶಾಸಕರ ನೇತೃತ್ವದಲ್ಲಿ ಉಡುಪಿಯ ಸಾರ್ವಜನಿಕರು ಶ್ರಮದಾನದ ಮೂಲಕ ನದಿಯನ್ನು ಸ್ವಚ್ಛಗೊ ಳಿಸುವ, ಹೂಳೆತ್ತುವ, ನೀರಿನ ಹರಿವನ್ನು ಸುಗಮಗೊಳಿಸುವ ಕಾರ್ಯ ನಡೆಸಿದ್ದರು. ಇಂದು ಕೇವಲ ಅಧಿಕಾರಿಗಳು ಮಾತ್ರ ಕಾರ್ಮಿಕರ ನೆರವಿನಿಂದ ಈ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂತು.

ಕಳೆದ ಐದಾರು ದಿನಗಳಿಂದ ಉಡುಪಿ ಶಾಸಕರ ನೇತೃತ್ವದಲ್ಲಿ ಉಡುಪಿಯ ಸಾರ್ವಜನಿಕರು ಶ್ರಮದಾನದ ಮೂಲಕ ನದಿಯನ್ನು ಸ್ವಚ್ಛಗೊ ಳಿಸುವ, ಹೂಳೆತ್ತುವ, ನೀರಿನ ಹರಿವನ್ನು ಸುಗಮಗೊಳಿಸುವ ಕಾರ್ಯ ನಡೆಸಿದ್ದರು. ಇಂದು ಕೇವಲ ಅಧಿಕಾರಿಗಳು ಮಾತ್ರ ಕಾರ್ಮಿಕರ ನೆರವಿನಿಂದ ಈ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂತು. ಸುಮಾರು 4-5 ಮಂದಿ ಕಾರ್ಮಿಕರು, 2 ಟಿಪ್ಪರ್‌ಗಳು ಈ ಕೆಲಸದಲ್ಲಿ ತೊಡಗಿಕೊಂಡಿದ್ದವು. ಇಂದು ಸಹ ಪುತ್ತಿಗೆ, ಭಂಡಾರಿಬೆಟ್ಟು ಪರಿಸರ ಲ್ಲಿ ಪಂಪಿಂಗ್ ಕಾರ್ಯ ನಡೆಯುತ್ತಿದೆ.

ಗುರುವಾರ ನೀರು ಪೂರೈಕೆ ಪ್ರದೇಶ:   ಗುರುವಾರ ನಗರಸಭೆ ವತಿಯಿಂದ ಈಶ್ವರನಗರ, ನೆಹರೂ ನಗರ, ಸರಳೇಬೆಟ್ಟು, ಕೊಂಡಂಗೆ, ನರಸಿಂಗೆ, ವಿವೇಕಾನಂದ ನಗರ, ಶೇಷಾದ್ರಿ ನಗರ, ವಿ.ಪಿ. ನಗರ, ಇಂದ್ರಾಳಿ, ಗುಳ್ಮೆ, ರೈಲ್ವೇ ಗೋಡಾನ್ ರೋಡ್, ಮಂಚಿ ಶಾಲೆ ರಸ್ತೆ, ಹಯಗ್ರೀವ ನಗರ, ಲಕ್ಷ್ಮೀಂದ್ರ ನಗರ, ಸಗ್ರಿ, ಪೆರಂಪಳ್ಳಿ, ಅಂಬಡೆಬೆಟ್ಟು, ವಿ.ಎಂ. ನಗರ, ದೊಡ್ಡಣಗುಡ್ಡೆ ರೈಲ್ವೇ ಸೇತುವೆವರೆಗೆ, ಪೆರಂಪಳ್ಳಿ ರೈಲ್ವೇ ಸೇತುವೆವರೆಗೆ, ಆದಿಪರಾಶಕ್ತಿ ದೇವಸ್ಥಾನ ರಸ್ತೆ, ರುದ್ರಪ್ರಿಯ ನಗರ, ಪರ್ತ್ರಕರ್ತರ ಕಾಲನಿ, ವಿದ್ಯಾರತ್ನ ನಗರ, ಶೀಂಬ್ರ, ಮಣಿಪಾಲ ಸಿಟಿ, ಕುದ್ಮಲ್ ರಂಗರಾವ್ ನಗರ ಕೊಡಂಕೂರು, ನ್ಯೂ ಕೊಡಂಕೂರು, ಸಾಯಿಬಾಬ ನಗರ, ಮೂಡಬೆಟ್ಟು, ಆದಿ ಉಡುಪಿ, ಮುಖ್ಯಪ್ರಾಣ ನಗರ, ನಾಗೇಶ್‌ನಗರ, ಕುದ್ಮಲ್ ರಂಗರಾವ್ ನಗರ, ರಾಜೀವ್ ನಗರ.

ಮೇಲಿನ ಪ್ರದೇಶಗಳಿಗೆ ಗುರುವಾರ ನೀರು ಸರಬರಾಜು ಮಾಡಲಾಗುವುದು, ಈ ದಿನದಂದು ನೀರು ಸರಬರಾಜು ಆಗದೇ ಇರುವ ಮನೆಗಳ ದೂರನ್ನು ಪರಿಶೀಲಿಸಿ ಟ್ಯಾಂಕರ್‌ಗಳ ಮೂಲಕ ಮರುದಿನ ಆದ್ಯತೆ ಮೇರೆಗೆ ನೀರು ಸರಬರಾಜು ಮಾಡಲಾಗುವುದು.

ಮೇಲಿನ ಪ್ರದೇಶಗಳಿಗೆ ಗುರುವಾರ ನೀರು ಸರಬರಾಜು ಮಾಡಲಾಗುವುದು, ಈ ದಿನದಂದು ನೀರು ಸರಬರಾಜು ಆಗದೇ ಇರುವ ಮನೆಗಳ ದೂರನ್ನು ಪರಿಶೀಲಿಸಿ ಟ್ಯಾಂಕರ್‌ಗಳ ಮೂಲಕ ಮರುದಿನ ಆದ್ಯತೆ ಮೇರೆಗೆ ನೀರು ಸರಬರಾಜು ಮಾಡಲಾಗುವುದು. ಬೆಳಗ್ಗೆ ಅಗತ್ಯವಿರುವ ನೀರಿನ ಪ್ರಮಾಣ ಲಭ್ಯವಿಲ್ಲದಿದ್ದಲ್ಲಿ ಅಪರಾಹ್ನದ ಬಳಿಕ ನೀರು ಸರಬರಾಜು ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News