ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಗಲಭೆ ಇರಲಿಲ್ಲ, ಮೋದಿ ಆಡಳಿತದಲ್ಲಿ ಹಿಂಸಾಚಾರವೇ ಹೆಚ್ಚು: ಮಾಯಾವತಿ
Update: 2019-05-15 22:20 IST
ಲಕ್ನೋ, ಮೇ 15: ನಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತರಪ್ರದೇಶದಲ್ಲಿ ಯಾವುದೇ ರೀತಿಯ ಗಲಭೆಗಳು ನಡೆದಿಲ್ಲ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.
ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ಅನೇಕ ಬಾರಿ ಹಿಂಸಾಚಾರ ನಡೆದಿದೆ. ಪ್ರಧಾನಿ ಹುದ್ದೆಗೆ ಅವರು ಅನರ್ಹರು ಎಂದು ಪರಿಗಣಿಸಬೇಕಾಗಿದೆ ಎಂದು ಮಾಯಾವತಿ ಹೇಳಿದರು.
ನರೇಂದ್ರ ಮೋದಿ ಅವರು ಬಹುಕಾಲ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಆದರೆ, ಅವರ ಅಧಿಕಾರಾವಧಿ ಬಿಜೆಪಿಗೆ ಕಪ್ಪು ಚುಕ್ಕೆ. ಆದರೆ, ನನ್ನ ಅಧಿಕಾರಾವಧಿ ಯಲ್ಲಿ ಉತ್ತರಪ್ರದೇಶ ಕೋಮವಾದ, ಗಲಭೆ ಹಾಗೂ ಅರಾಜಕತೆ ಮುಕ್ತವಾಗಿತ್ತು ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಅನರ್ಹರು ಎಂದು ಮಾಯಾವತಿ ಹೇಳಿದರು. ಇತರ ಪಕ್ಷಗಳನ್ನು ಭ್ರಷ್ಟ ಎಂದು ಕರೆಯುವ ರೋಗ ಬಿಜೆಪಿಗೆ ಇದೆ. ಹೆಚ್ಚು ಭ್ರಷ್ಟಾಚಾರಿಗಳು ಬಿಜೆಪಿಯಲ್ಲೇ ಇದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಮಾಯಾವತಿ ಹೇಳಿದರು.