×
Ad

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಇಫ್ತಾರ್ ಕೂಟ

Update: 2019-05-15 22:29 IST

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ ಇದರ ಆಶ್ರಯದಲ್ಲಿ ಬಾಂಬೆ ಹೋಟೆಲ್ ನಲ್ಲಿ ಬುಧವಾರ ಇಫ್ತಾರ್ ಕೂಟ ನಡೆಯಿತು.

ಕಾರ್ಯ ಕ್ರಮವನ್ನು ಬಿ.ಎಂ.ಮಹಮ್ಮದ್ ಅಲಿ ಉದ್ಘಾಟಿಸಿ ಮಾತನಾಡಿ, ಅಲ್ಲಾಹನು ಎಲ್ಲರಿಗೂ ಒಂದೇ ಶಕ್ತಿ ನೀಡುವುದಿಲ್ಲ. ಆದರೆ ನೀಡಿದ ಶಕ್ತಿಯನ್ನು ಬಳಸಿ ಕೊಳ್ಳಬೇಕು. ಉಪವಾಸದ ಈ ಸಂದರ್ಭದಲ್ಲಿ ನಾವು ಪ್ರೀತಿ ವಿಶ್ವಾಸವನ್ನಿಟ್ಟು ಕೊಳ್ಳಬೇಕಾಗಿದೆ ಎಂದರು.

ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಉಪವಾಸದ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಅ.ಭಾ.ಬ್ಯಾ.ಪರಿಷತ್ ಅಧ್ಯಕ್ಷ ಮಹಮ್ಮದ್ ಹನೀಫ್ ವಹಿಸಿದ್ದರು.

ಈ ಸಂದರ್ಭ ಮಾಜಿ ಮೇಯರ್ ಅಶ್ರಫ್, ಅಖಿಲ ಭಾರತ ಬ್ಯಾರಿ ಪರಿಷತ್ ಕಾರ್ಯದರ್ಶಿ ವಿ ಮಹಮ್ಮದ್, ಪ್ರ. ಕಾರ್ಯದರ್ಶಿ ಅಬೂಬಕರ್ ಪಲ್ಲಮಜಲ್, ಮಾಜಿ ಅಧ್ಯಕ್ಷ ಜೆ ಹುಸೈನ್, ಕೋಶಾಧಿಕಾರಿ ನಿಸಾರ್ ಫಕೀರ್ ಮಹಮ್ಮದ್, ಮೆಟ್ರೊ ಶಾಹುಲ್ ಹಮೀದ್, ಮಹಮ್ಮದ್ ಬ್ಯಾರಿ ಎಡಪದವು, ಬಿ.ಎಂ. ಮಹಮ್ಮದ್ ಅಲಿ, ಮೂಸಬ್ಬ ಬ್ಯಾರಿ, ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಎಫ್.ಎ. ಖಾದರ್ ,ಹೈದರ್ ಪರ್ತಿಪಾಡಿ, ವಿ. ಮಹಮ್ಮದ್ ಬಜ್ಪೆ ಅಹ್ಮದ್ ಬಾವ ಬಜಾಲ್, ಇಬ್ರಾಹಿಂ ಕೋಡಿಜಾಲ್ ಉಪಸ್ಥಿತರಿದ್ದರು.

ಹಾರೀಸ್ ತೋಡಾರ್ ಕಿರಾಅತ್ ಪಠಿಸಿದರು. ಜೆ ಹುಸೈನ್ ಸ್ವಾಗತಿಸಿದರು. ಖಾಲೀದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News