ಪುರಸಭೆ ಚುನಾವಣೆ; ಸೂಚಕರ ತೆರಿಗೆ ಬಾಕಿ ಕುರಿತ ಗೊಂದಲಕ್ಕೆ ಮಾಜಿ ಅಧ್ಯಕ್ಷ ಆಕ್ಷೇಪ

Update: 2019-05-15 17:56 GMT

ಭಟ್ಕಳ: ಭಟ್ಕಳ ಪುರಸಭೆ ಚುನಾವಣೆಯಲ್ಲಿ ಸೂಚಕರ ತೆರಿಗೆ ಬಾಕಿ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳು ಅಭ್ಯರ್ಥಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಮಾಜಿ ಅಧ್ಯಕ್ಷ ಪರ್ವೇಝ್ ಕಾಸಿಮಜಿ ಆಕ್ಷೇಪಿಸಿದರು.

ಅವರು ತಹಶೀಲ್ದಾರ್ ಎನ್.ಬಿ.ಪಾಟೀಲ್ ರೊಂದಿಗೆ ಮಾತುಕತೆ ನಡೆಸಿ, ಚುನಾವಣಾಧಿಕಾರಿಗಳ ನಡೆಗೆ ಭಾರಿ ಆಕ್ಷೇಪ ವ್ಯಕ್ತಪಡಿಸಿದರು.

ಪುರಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಸೂಚಕರ ತೆರಿಗೆ ಬಾಕಿಯ ಕುರಿತಂತೆ ನಾಮಪತ್ತ ಸಲ್ಲಿಕೆಯ ಸಂದರ್ಭದಲ್ಲಿ ಗೊಂದಲಮಯ ವಾತರವರಣ ಸೃಷ್ಟಿಯಾಗಿದ್ದು ಅಭ್ಯರ್ಥಿಪರ ಸೂಚಕರ ತೆರಿಗೆ ಪಾಪತಿ ರಶಿದಿ ಸಲ್ಲಿಸುವ ಬಗ್ಗೆ ಎಲ್ಲಿಯೂ ನಿಯಮವಿಲ್ಲ. ಅಭ್ಯರ್ಥಿಗಳಿಗೆ ಮಾತ್ರ ಇದು ಕಡ್ಡಾಯವಾಗಿದ್ದು ಚುನಾವಣ ನಿಯಮದಂತೆ ಓರ್ವ ಅಭ್ಯರ್ಥಿ 4 ಸೆಟ್ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಪ್ರತಿ ನಾಮಪತ್ರಕ್ಕೆ 4 ಸೂಚಕರಂತೆ 16 ಸೂಚಕರಾಗುತ್ತಾರೆ. ನಾಮಪತ್ರಸಲ್ಲಿಕೆ ಕೊನೆ ದಿನ ಬಾಕಿ ಇರುವಾಗ ಎಲ್ಲರ ತೆರೆಗೆ ಬಾಕಿಯನ್ನು ನೋಡಿಕೊಳ್ಳುತ್ತ ಕುಳಿತುಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ತೆರಿಗೆ ಬಾಕಿಯ ವಿಷಯದಲ್ಲಿ ಪುರಸಭಾ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಚುನಾವಣಾ ವಿಷಯದಲ್ಲಿ ಅಧಿಕಾರಿ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂದು ಕಾಶಿಮಜಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪಾಟೀಲ್, ನಾವು ಸೂಚಕರ ತೆರಿಗೆ ಪಾವತಿ ರಶಿದಿಯನ್ನು ಪ್ರಸ್ತಾಪಿಸಿಲ್ಲ, ತೆರೆಗೆ ಪಾವತಿಯ ಸಂಬಂಧ ನಾವು ನೋಟೀಸ್ ಜಾರಿ ಮಾಡುತ್ತೇವೆ. ಮೂರು ತಿಂಗಳ ಒಳಗೆ ಬಾಕಿ ಶುಲ್ಕವನ್ನು ಪಾವತಿಸಲು ಅವಕಾಶವಿರುತ್ತದೆ ಎಂದು ಸಮಧಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News