ಪಾಕ್‌ನ 90 ವಧುಗಳ ವೀಸಾ ತಡೆಹಿಡಿದ ಚೀನಾ

Update: 2019-05-15 18:17 GMT

ಇಸ್ಲಾಮಾಬಾದ್, ಮೇ 15: ನಕಲಿ ವಿವಾಹಗಳ ಮೂಲಕ ಪಾಕಿಸ್ತಾನಿ ಹುಡುಗಿಯರನ್ನು ಚೀನಾಕ್ಕೆ ಸಾಗಿಸಲಾಗುತ್ತಿದೆ ಎಂಬ ವಿವಾದದ ಹಿನ್ನೆಲೆಯಲ್ಲಿ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯು ಪಾಕಿಸ್ತಾನದ 90 ವಧುಗಳ ವೀಸಾಗಳನ್ನು ತಡೆಹಿಡಿದಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ತಮ್ಮ ಪಾಕಿಸ್ತಾನಿ ವಧುಗಳಿಗೆ ವೀಸಾಗಳನ್ನು ನಿಡುವಂತೆ ಈ ವರ್ಷ ಚೀನಾ ರಾಷ್ಟ್ರೀಯರಿಂದ 140 ಅರ್ಜಿಗಳನ್ನು ಸ್ವೀಕರಿಸಿತ್ತು ಎಂದು ರಾಯಭಾರ ಕಚೇರಿಯ ಉಪಮುಖ್ಯಸ್ಥ ಲಿಜಿಯನ್ ಝಾವೊ ಮಂಗಳವಾರ ಹೇಳಿದರು.

ಕೇವಲ 50 ವೀಸಾಗಳನ್ನು ನೀಡಲಾಗಿದೆ ಹಾಗೂ ಉಳಿದ ಅರ್ಜಿಗಳನ್ನು ತಡೆಹಿಡಿಯಲಾಗಿದೆ ಎಂದರು.

2018ರಲ್ಲಿ ಇಂಥ 142 ಅರ್ಜಿಗಳು ಬಂದಿವೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಮದುವೆಯ ಹೆಸರಿನಲ್ಲಿ ಪಾಕಿಸ್ತಾನಿ ಹುಡುಗಿಯರನ್ನು ಚೀನಾಕ್ಕೆ ಸಾಗಿಸುವ ತಂಡಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನ ಸರಕಾರವು ಇತ್ತೀಚೆಗೆ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ)ಗೆ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News