ಉಡುಪಿ: ವಸತಿ ಶಾಲೆಗೆ ಬಾಡಿಗೆ ಕಟ್ಟಡ ಬೇಕಾಗಿದೆ
Update: 2019-05-16 20:26 IST
ಉಡುಪಿ, ಮೇ 16: ಜಿಲ್ಲೆಯ ಸಿದ್ಧಾಪುರಕ್ಕೆ ಮಂಜೂರಾಗಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ ಕಟ್ಟಡದ ಅಗತ್ಯವಿದ್ದು, 250 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಹಾಗೂ ತರಗತಿ ನಡೆಸಲು ಅನುಕೂಲವಾಗುವ ಎಲ್ಲಾ ಮೂಲೂತ ಸೌಕರ್ಯಗಳೊಂದಿಗೆ ಉತ್ತಮ ನೀರಿನ ಸೌಲಭ್ಯ ಹೊಂದಿರುವ 12000ರಿಂದ 15000 ಚ.ಅ. ವಿರ್ಸ್ತೀಣದ ಸುಸಜ್ಜಿತ ಕಟ್ಟಡವನ್ನು ಸಿದ್ದಾಪುರ ಕೇಂದ್ರ ಸ್ಥಾನದಲ್ಲಿ ಬಾಡಿಗೆಗೆ ಪಡೆಯಲು ಉದ್ದೇಶಿಸಲಾಗಿದೆ.
ಆದುದರಿಂದ ಆಸಕ್ತ ಕಟ್ಟಡ ಮಾಲಕರು ಸೂಕ್ತ ದಾಖಲೆಗಳೊಂದಿಗೆ ಮನವಿಯನ್ನು ಮೇ 24 ರೊಳಗೆ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ, ಐಟಿಡಿಪಿ ಇಲಾಖೆ, ರಜತಾದ್ರಿ ಮಣಿಪಾಲ ಉಡುಪಿ ಇಲ್ಲಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ: 0820-2574814ನ್ನು ಸಂಪರ್ಕಿಸುವಂತೆ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.