ಮೇ 19: ಪೊಳಲಿ ಮಸೀದಿಯಲ್ಲಿ ಹಿಫ್ಲುಳ್ ಕುರ್‌ಆನ್ ಪ್ರವೇಶ ಪರೀಕ್ಷೆ

Update: 2019-05-16 16:07 GMT

ಮಂಗಳೂರು, ಮೇ 16: ಪೊಳಲಿಯ ಬಾಬಾ ಫಕ್ರುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ‘ಕುರ್‌ಆನ್ ಅರಿಯಲು ಮತ್ತು ಕಲಿಯಲು’ ಹಝ್ರತ್ ಬಾಬಾ ಫಕ್ರುದ್ದೀನ್ ಹಿಫುಳ್ (ಕುರ್‌ಆನ್ ಕಂಠಪಾಠ) ಕಾಲೇಜಿನ ಹೊಸ ಬ್ಯಾಚ್‌ನ ದಾಖಲಾತಿ ಆರಂಭಿಸಲಾಗಿದ್ದು, ಮೇ 19ರಂದು ಬೆಳಗ್ಗೆ 10:30ಕ್ಕೆ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಕೆ.ಇ. ರಮ್ಲಾನ್ ಹಾಜಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರವೇಶ ಪರೀಕ್ಷೆಯ ಸಂದರ್ಭ ವಿದ್ಯಾರ್ಥಿಗಳ ಪೋಷಕರು ಹಾಜರಿರಬೇಕು. ಐದನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ನುರಿತ ಅಧ್ಯಾಪಕ ವೃಂದದಿಂದ ಉತ್ತಮ ಮಾರ್ಗದರ್ಶನ, ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಅಲ್ಲದೆ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯದ ಕುರಿತು ಕೂಡ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು. ಉಚಿತ ವಸತಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅದಿಲ್ ತಂಙಳ್ ಮೊಗ್ರಾಲ್, ಉಪಾಧ್ಯಕ್ಷ ಮುಹಮ್ಮದ್ ಅಜ್ಮೀರ್, ಸದಸ್ಯ ಜಾಫರ್ ಅಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News