ಒಂದು ಲಕ್ಷ ಕಿ.ಮೀ.ಗಳ ಸಂಚಾರ ಪೂರೈಸಿದ ಅತ್ಯಂತ ವೇಗದ ರೈಲು ‘ವಂದೇ ಭಾರತ ಎಕ್ಸ್‌ಪ್ರೆಸ್’

Update: 2019-05-16 16:38 GMT

ಹೊಸದಿಲ್ಲಿ,ಮೇ 16: ಸ್ವದೇಶಿ ನಿರ್ಮಿತ,ಭಾರತದ ಅತ್ಯಂತ ವೇಗದ ರೈಲು ವಂದೇ ಭಾರತ ಎಕ್ಸ್‌ಪ್ರೆಸ್ ಬುಧವಾರ ತನ್ನ ಒಂದು ಲಕ್ಷ ಕಿ.ಮೀ.ಗಳ ಸಂಚಾರವನ್ನು ಪೂರ್ಣಗೊಳಿಸಿದೆ.

 ಫೆ.15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸುವುದರೊಂದಿಗೆ ದಿಲ್ಲಿಯಿಂದ ವಾರಣಾಸಿಗೆ ಮೊದಲ ಪ್ರಯಾಣವನ್ನು ಆರಂಭಿಸಿದ್ದ ವಂದೇ ಭಾರತ ಕಳೆದ ಮೂರು ತಿಂಗಳಲ್ಲಿ ಒಂದೇ ಒಂದು ನಿಗದಿತ ಪ್ರಯಾಣವನ್ನು ತಪ್ಪಿಸಿಕೊಳ್ಳದೆ ಒಂದು ಲಕ್ಷ ಕಿ.ಮೀ.ಗಳ ಸಂಚಾರವನ್ನು ಪೂರ್ಣಗೊಳಿಸಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಗುರುವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ವಂದೇ ಭಾರತ ಮೊದಲ ದಿನ ವಾರಣಾಸಿಯಿಂದ ದಿಲ್ಲಿಗೆ ಮರಳುವಾಗ ಕಾನ್ಪುರದ ಬಳಿ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿತ್ತು.

ಫೆ.17ರಂದು ತನ್ನ ಮೊದಲ ವಾಣಿಜ್ಯಿಕ ಸಂಚಾರವನ್ನು ಆರಂಭಿಸಿದ್ದ ಅದು ಶೀಘ್ರವೇ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳ ಬದಲಿಗೆ ಬಳಕೆಯಾಗಲಿದೆ.

16 ಬೋಗಿಗಳ ಈ ಅತ್ಯಾಧುನಿಕ ರೈಲು ತಲಾ 52 ಆಸನಗಳ ಎರಡು ಎಕ್ಸಿಕ್ಯೂಟಿವ್ ಕಂಪಾರ್ಟ್‌ಮೆಂಟ್‌ಗಳು ಮತ್ತು ತಲಾ 78 ಆಸನಗಳ ಟ್ರೇಲರ್ ಬೋಗಿಗಳನ್ನು ಹೊಂದಿದೆ. ಎಕ್ಸಿಕ್ಯೂಟಿವ್ ದರ್ಜೆಯ ಬೋಗಿಗಳು ರೈಲಿನ ಚಲನೆಯ ದಿಕ್ಕಿನೊಂದಿಗೆ ಹೊಂದಾಣಿಕೆಗಾಗಿ ತಿರುಗುವ ಆಸನಗಳನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News