ಮಂಗಳೂರು: ರಕ್ತದ ಎಲ್ಲ ಗುಂಪುಗಳು ಲಭ್ಯ

Update: 2019-05-16 17:27 GMT

ಮಂಗಳೂರು, ಮೇ 16: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಕ್ತ ನಿಧಿಯು ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ರೋಗಿಗಳಿಗೆ ರಕ್ತ ನೀಡಲು ರಕ್ತದ ಕೊರತೆ ಕಂಡುಬಂದಿತ್ತು. ಆದರೆ ಕಳೆದ ಒಂದು ವಾರದಿಂದ ಸತತವಾಗಿ ರಕ್ತದಾನ ಶಿಬಿರಗಳನ್ನು ಸಂಸ್ಥೆಯಿಂದ ಏರ್ಪಡಿಸಲಾಗಿದ್ದು, ರಕ್ತದ ಎಲ್ಲ ಗುಂಪುಗಳು ಲಭ್ಯವಿರುತ್ತವೆ ಎಂದು ರೆಡ್‌ಕ್ರಾಸ್ ನಿಧಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೂಡ ವಿವಿಧ ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಸಿದ್ಧವಾಗಿದ್ದು, ರಕ್ತದ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವ್ಯಕ್ತಿಗತವಾಗಿ ಕೂಡ ದಾನಿಗಳು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಸರಕಾರಿ ಲೇಡಿಗೋಷನ್ ಆವರಣದಲ್ಲಿರುವ ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್‌ಗೆ ಬಂದು ರಕ್ತದಾನವನ್ನು ಮಾಡಬಹುದು.

ರೆಡ್‌ಕ್ರಾಸ್ ರಕ್ತನಿಧಿಯ ದೂ.ಸಂ.: 0824- 2410787/ 2424788ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News