ವೆನೆಝುವೆಲಕ್ಕೆ ವಿಮಾನ ಹಾರಾಟ ನಿಲ್ಲಿಸಿದ ಅಮೆರಿಕ

Update: 2019-05-16 17:38 GMT

ವಾಶಿಂಗ್ಟನ್, ಮೇ 16: ಅಮೆರಿಕ ಮತ್ತು ವೆನೆಝುವೆಲಗಳ ನಡುವಿನ ಎಲ್ಲ ಪ್ರಯಾಣಿಕ ಮತ್ತು ಸರಕು ವಿಮಾನಗಳ ಹಾರಾಟವನ್ನು ನಿಲ್ಲಿಸುವಂತೆ ಅಮೆರಿಕದ ಸಾರಿಗೆ ಇಲಾಖೆ ಬುಧವಾರ ಆದೇಶಿಸಿದೆ. ವೆನೆಝುವೆಲದ ವಿಮಾನ ನಿಲ್ದಾಣಗಳ ಸುತ್ತ ಅಶಾಂತಿ ಮತ್ತು ಹಿಂಸಾಚಾರ ನಡೆಯುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಈ ಸಂಬಂಧ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯು ಸಾರಿಗೆ ಇಲಾಖೆಗೆ ಪತ್ರವೊಂದನ್ನು ಬರೆದಿದೆ. ''ವೆನೆಝುವೆಲದಲ್ಲಿ ನೆಲೆಸಿರುವ ಪರಿಸ್ಥಿತಿಯಿಂದಾಗಿ ಆ ದೇಶಕ್ಕೆ ಪ್ರಯಾಣಿಸುವ ಅಥವಾ ಅಲ್ಲಿಂದ ಹೊರಹೋಗುವ ಪ್ರಯಾಣಿಕರ ಭದ್ರತೆಗೆ ಬೆದರಿಕೆಯಾಗಿದೆ'' ಎಂಬುದಾಗಿ ಆಂತರಿಕ ಭದ್ರತಾ ಇಲಾಖೆಯು ತನ್ನ ಪತ್ರದಲ್ಲಿ ಹೇಳಿದೆ.ಹಲವು ಅಂತರ್‌ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ವೆನೆಝುವೆಲದ ಹಾರಾಟವನ್ನು ಈಗಾಗಲೇ ನಿಲ್ಲಿಸಿವೆ. ಅಲ್ಲಿ ನೆಲೆಸಿರುವ ಭದ್ರತಾ ಸ್ಥಿತಿಗತಿ ಮತ್ತು ಅಲ್ಲಿನ ಸರಕಾರ ಪಾವತಿಸಬೇಕಾಗಿರುವ ಹಣಕ್ಕೆ ಸಂಬಂಧಿಸಿದ ವಿವಾದಗಳ ಹಿನ್ನೆಲೆಯಲ್ಲಿ ಅವುಗಳು ಈ ಕ್ರಮಗಳನ್ನು ತೆಗೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News