ಮತದಾನೋತ್ತರ ಸಮೀಕ್ಷೆ ಸಂಬಂಧಿಸಿದ ಟ್ವೀಟ್‌ಗಳನ್ನು ತೆಗೆಯಲು ಟ್ವಿಟರ್‌ಗೆ ಸೂಚನೆ

Update: 2019-05-16 18:26 GMT

ಹೊಸದಿಲ್ಲಿ, ಮೇ 16: 7 ಹಂತಗಳ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ತಲುಪುತ್ತಿರುವಂತೆಯೇ ಟ್ವಿಟರ್‌ಗೆ ಸೂಚನೆ ನೀಡಿರುವ ಚುನಾವಣಾ ಆಯೋಗವು, ಮತದಾನೋತ್ತರ ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಟ್ವೀಟ್‌ಗಳನ್ನು ತೆಗೆದು ಹಾಕುವಂತೆ ತಿಳಿಸಿದೆ .

ಮೂರು ಮಾಧ್ಯಮ ಸಂಸ್ಥೆಗಳು ಲೋಕಸಭಾ ಚುನಾವಣೆಯ ಫಲಿತಾಂಶದ ಭವಿಷ್ಯ ನುಡಿಯುವ ಮತದಾನ ಸಮೀಕ್ಷೆಯನ್ನು ಪ್ರಸಾರ ಮಾಡಿರುವ ಕುರಿತ ದೂರು ದಾಖಲಾದ ಒಂದು ದಿನದ ಬಳಿಕ ಚುನಾವಣಾ ಆಯೋಗದ ಸೂಚನೆ ಹೊರಬಿದ್ದಿದೆ. ಜನಪ್ರತಿ ಕಾಯ್ದೆಯ 126ಎ ಸೆಕ್ಷನ್‌ನ ವಿಧಿಗಳನ್ನು ಉಲ್ಲಂಘಿಸಿದ್ದಕ್ಕೆ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು 48 ಗಂಟೆಯೊಳಗೆ ವಿವರಣೆ ನೀಡುವಂತೆ ಈ ಮಾಧ್ಯಮ ಸಂಸ್ಥೆಗಳಿಗೆ ಆಯೋಗ ಗುರುವಾರ ತಿಳಿಸಿದೆ.

ಮತದಾನೋತ್ತರ ಸಮೀಕ್ಷೆಯ ಬಗ್ಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಥಮ ದಿನದಿಂದ ಅಂತಿಮ ದಿನದವರೆಗೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನೋತ್ತರ ಸಮೀಕ್ಷೆಯನ್ನು ಪ್ರಸಾರ ಮಾಡುವಂತಿಲ್ಲ. 7 ಹಂತಗಳ ಲೋಕಸಭಾ ಚುನಾವಣೆ ಎಪ್ರಿಲ್ 11ರಂದು ಆರಂಭಗೊಂಡಿದ್ದು ಮೇ 19ರಂದು ನಡೆಯುವ ಅಂತಿಮ ಹಂತದ ಮತದಾನದ ಬಳಿಕ ಮತದಾನೋತ್ತರ ಸಮೀಕ್ಷೆಯ ಘೋಷಣೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News