ಅಕ್ರಮ ಮರಳು ಸಾಗಾಟ: ಚಾಲಕ ಸಹಿತ ವಾಹನ ವಶ

Update: 2019-05-17 16:09 GMT

ಮಲ್ಪೆ, ಮೇ 17: ಮೂಡುತೋನ್ಸೆ ಗ್ರಾಮದ ನಿಡಂಬಳ್ಳಿ ಮುದಲ ಕಟ್ಟೆ ಎಂಬಲ್ಲಿ ಮೇ 17ರಂದು ಬೆಳಗ್ಗೆ 8:30ರ ಸುಮಾರಿಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಚಾಲಕ ಹಾಗೂ ಮರಳು ಸಹಿತ ಮಿನಿ ಟಿಪ್ಪರ್‌ನ್ನು ಮಲ್ಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಕಾಡಿ ಗಾಂಧಿನಗರದ ಶಂಕರ್(47) ಬಂಧಿತ ಆರೋಪಿ. ಮಹಮ್ಮದ್ ಶಫಿ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದು ದಾಳಿ ನಡೆಸಿದ ಪೊಲೀಸರು ಚಾಲಕನನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. 8 ಸಾವಿರ ರೂ. ಮೌಲ್ಯದ ಒಂದು ಯೂನಿಟ್ ಮರಳು ಹಾಗೂ 3,00,000 ರೂ. ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News