ಎಲ್ಲಾ ಧರ್ಮಗಳಲ್ಲೂ ಉಗ್ರರಿದ್ದಾರೆ: ಕಮಲ್ ಹಾಸನ್

Update: 2019-05-17 16:27 GMT

ಅರವಕುರಿಚಿ, ಮೇ 17: “ರಾಜಕೀಯದ ಗುಣಮಟ್ಟ ಕೆಳಗೆ ಇಳಿಯುತ್ತಿದೆ. ನನಗೆ ಬೆದರಿಕೆ ಇದೆ ಎಂದು ಭಾವಿಸುವುದಿಲ್ಲ. ಪ್ರತಿ ಧರ್ಮದಲ್ಲಿ ಕೂಡ ಉಗ್ರರಿದ್ದಾರೆ. ನಾವು ಪವಿತ್ರರು ಎಂದು ಯಾರೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ಧರ್ಮಗಳಲ್ಲಿ ಉಗ್ರರಿದ್ದರು ಎಂಬುದನ್ನು ಚರಿತ್ರೆ ತೋರಿಸಿಕೊಟ್ಟಿದೆ” ಎಂದು ನಟ ಹಾಗೂ ಮಕ್ಕಳ್ ನೀದಿ ಮಯ್ಯಮ್ (ಎಂಎನ್‌ಎಂ) ಪಕ್ಷದ ವರಿಷ್ಠ ಕಮಲ್ ಹಾಸನ್ ಹೇಳಿದ್ದಾರೆ.

ಕೊಯಂಬತ್ತೂರಿನಲ್ಲಿ ನಡೆದ ಪ್ರಚಾರ ರ್ಯಾಲಿಯ ಸಂದರ್ಭ ವೇದಿಕೆಯಲ್ಲಿ ಈ ಹೇಳಿಕೆ ನೀಡಿ ಕೆಳಗಿಳಿಯುತ್ತಿದ್ದಾಗ ಕಮಲ್ ಹಾಸನ್ ಅವರ ಮೇಲೆ ದುಷ್ಕರ್ಮಿಗಳು ಕಲ್ಲು ಹಾಗೂ ಮೊಟ್ಟೆಗಳನ್ನು ಎಸೆದಿದ್ದಾರೆ. ಕಮಲ್ ಹಾಸನ್ ಭಾಷಣ ಮಾಡಿ ವೇದಿಕೆಯಿಂದ ಕೆಳಗೆ ಇಳಿಯುತ್ತಿರುವ ಸಂದರ್ಭ ದುಷ್ಕರ್ಮಿಗಳು ಕಲ್ಲು ಹಾಗೂ ಮೊಟ್ಟೆಗಳನ್ನು ಎಸೆದಿದ್ದಾರೆ. ಆದರೆ, ಇದರಿಂದ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಕಮಲ್ ಹಾಸನ್‌ಗೆ ರಕ್ಷಣೆ ನೀಡಿ ಸುರಕ್ಷಿತವಾಗಿ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಲು ಹಾಗೂ ಮೊಟ್ಟೆ ಎಸೆದ ಶಂಕೆಯಲ್ಲಿ ಎಂಎನ್‌ಎಂ ಕಾರ್ಯಕರ್ತರು ಇಬ್ಬರನ್ನು ಹಿಡಿದಿರಿಸಿದರು. ಕೂಡಲೇ ಆಗಮಿಸಿದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಘಟನೆಯ ಹಿನ್ನೆಲೆಯಲ್ಲಿ ಎಂಎನ್‌ಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

 ಆದರೆ, ಪೊಲೀಸರು ಮಾತುಕತೆ ನಡೆಸಿದ ಬಳಿಕ ಕಾರ್ಯಕರ್ತರು ಪ್ರತಿಭಟನೆ ಹಿಂದೆತೆಗೆದುಕೊಂಡರು. ತಮಿಳುನಾಡಿನ ತಿರುಪ್ಪರಂಕುದ್ರಂ ವಿಧಾನ ಸಭಾ ಕ್ಷೇತ್ರದ ಚುನಾವಣಾ ರ್ಯಾಲಿಯಲ್ಲಿ ವಾಹನದಲ್ಲಿ ಕಮಲ್ ಹಾಸನ್ ನಿಂತು ಮಾತನಾಡುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಚಪ್ಪಲಿ ಎಸೆದ ಘಟನೆ ನಡೆದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News