×
Ad

ತುಂಬೆ ಹಳೇ ಅಣೆಕಟ್ಟು ಸಂಪೂರ್ಣ ಗೋಚರ: ನಾಗರಿಕರಲ್ಲಿ ಹೆಚ್ಚಿದ ಆತಂಕ

Update: 2019-05-17 22:30 IST

ಮಂಗಳೂರು, ಮೇ 17: ರೇಷನಿಂಗ್ ನಂತರ ಗುರುವಾರದಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆ ಆರಂಭವಾಗಿದ್ದು, 3.71ರಷ್ಟಿದ್ದ ನೀರು ಸಂಜೆ ವೇಳೆಗೆ 3.67 ಮೀ.ಗೆ ಇಳಿದಿದೆ. ಹಳೇ ಅಣೆಕಟ್ಟು ಸಂಪೂರ್ಣವಾಗಿ ಗೋಚರಿಸುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಶುಕ್ರವಾರ ನಗರಕ್ಕೆ ದಿನವಿಡೀ ನೀರು ಪೂರೈಕೆಯಾಗಿದ್ದು, ಶೇ.60-70ರಷ್ಟು ಪ್ರದೇಶಗಳಿಗೆ ನೀರು ತಲುಪಿದೆ. ನೀರು ತಲುಪದ ಪ್ರದೇಶಗಳಿಗೆ ಟ್ಯಾಂಕರ್ ಹಾಗೂ ಪಿಕಪ್ ಮೂಲಕ ಪಾಲಿಕೆಯಿಂದ ವಿತರಿಸಲಾಗಿದೆ.

ನಗರದ ಸೂಟರ್‌ಪೇಟೆ ಸೇರಿದಂತೆ ಮಂಗಳಾದೇವಿ ವಾರ್ಡ್‌ನಲ್ಲಿರುವ ಸಾರ್ವಜನಿಕ ಬಾವಿಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಾವಿಗಳಿಂದ ಟ್ಯಾಂಕರ್ ಮೂಲಕ ಸ್ಥಳೀಯವಾಗಿ ನೀರು ತಲುಪದ ಪ್ರದೇಶಗಳಿಗೆ ಪೂರೈಕೆ ನಡೆಸಲು ಉದ್ದೇಶಿಸಲಾಗಿದೆ. ಮುಂದಿನ ಎರಡು ದಿನ ತುಂಬೆಯಿಂದ ನಿರಂತರ ನೀರು ಸರಬರಾಜು ನಡೆಯಲಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ನೀರು ಸ್ಥಗಿತಗೊಳ್ಳಲಿದ್ದು, ನಾಲ್ಕು ದಿನ ಪೂರೈಕೆ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News