ವಚನ ಸಾಹಿತ್ಯಕ್ಕೆ ಕೊನೆ ಎಂಬುದಿಲ್ಲ: ವಿದುಷಿ ಅಮಿತಾ ಜೆತಿನ್

Update: 2019-05-18 14:31 GMT

ಉಡುಪಿ, ಮೇ 18: ವಚನ ಸಾಹಿತ್ಯಕ್ಕೆ ಕೊನೆ ಎಂಬುದಿಲ್ಲ. ಮಾನವನ ಜೀವನಕ್ಕೆ ಬೇಕಾದ ಎಲ್ಲ ಅಂಶಗಳು ವಚನದಲ್ಲಿ ಅಡಕವಾಗಿವೆ. ವಚನ ಅಂದರೆ ಮಾತು ಕೊಡುವುದು. ಶರಣರು ಎಂದಿಗೂ ಮಾತಿಗೆ ತಪ್ಪಿದವರಲ್ಲ ಮತ್ತು ಆತ್ಮ ವಂಚನೆ ಮಾಡಿದವರಲ್ಲ. ಹಾಗಾಗಿ ಇಡೀ ಜಗತ್ತೆ ಶರಣರ ಮಾತಿಗೆ ತಲೆಬಾಗುತ್ತದೆ ಎಂದು ನೃತ್ಯಗುರು ವಿದುಷಿ ಅಮಿತಾ ಜೆತಿನ್ ಹೇಳಿದ್ದಾರೆ.

ಬೆಂಗಳೂರಿನ ಜ್ಞಾನಮಂದಾರ ಅಕಾಡೆಮಿ, ಮುಂಬೈ ರಾಧಾಕೃಷ್ಣ ಅಕಾ ಡೆಮಿ ಮತ್ತು ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಸಂಸ್ಥೆಗಳ ಸಂಯುಕ್ತ ಆಶ್ರಯ ದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ 8ನೆ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳಾನಾಧ್ಯಕ್ಷರ ಸ್ಥಾನದಿಂದ ಅವರು ಮಾತನಾಡುತಿದ್ದರು.

ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸಾಧಕರಾದ ಎಸ್.ಎಸ್.ನಾಯಕ್, ಕೆ. ಎಸ್.ಗುರುಪ್ರಸಾದ್ ಮಂಡ್ಯ, ಪ್ರೇಮಲತಾ ರಾವ್ ಪುತ್ತೂರು, ಚಿತ್ತರಂಜನ್ ಬೋಳಾರ್, ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಸ್ವಾತಿ ಜೆ.ರಾವ್, ಹೇಮಲತಾ ಗಣೇಶ್ ಪುತ್ತೂರು ಅವರಿಗೆ ಸಮಾಜ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರೋಪ ಸಮಾರಂಭವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿಧ್ಧಗಂಗಾ ಶ್ರೀ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮಂಗಳೂರು ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಹೈಕೋರ್ಟ್ ನ್ಯಾಯವಾದಿ ಅರುಣ್ ಕುಮಾರ್, ಬೆಂಗಳೂರಿನ ಡಾಲ್ಫಿನ್ ಶಿಕ್ಷಣ ಸಂಸ್ಥೆಯ ಮಂಜುಾಥ್ ರಾವ್ ಮುಖ್ಯ ಅತಿಥಿಗಳಾಗಿದ್ದರು.

ಸಂಸ್ಥಾಪಕ ಎಚ್.ಜೆ.ಸೋಮಶೇಖರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿ, ಬೆಂಗಳೂರು ಮತ್ತು ನಾಡಿನ ಪ್ರತಿಭಾನ್ವಿತ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News