ಮಾಣೈಯಲ್ಲಿ ನೀರು ಖಾಲಿ: ಸೇತುವೆ ಬಳಿ ಡ್ರೆಡ್ಜಿಂಗ್ ಆರಂಭ

Update: 2019-05-18 16:28 GMT

ಉಡುಪಿ, ಮೇ 18: ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟಿಗೆ ನೀರು ಹರಿದು ಬರುತ್ತಿದ್ದು, ಸ್ವರ್ಣ ನದಿಯ ಮಾಣೈಯಲ್ಲಿ ಡ್ರೆಡ್ಜಿಂಗ್ ಕಾರ್ಯ ಮುಂದುವರೆದಿದೆ. ಇದೀಗ ಇಲ್ಲಿ ನೀರಿನ ಸಂಗ್ರಹ ಖಾಲಿ ಯಾಗುತ್ತಿರುವುದರಿಂದ ಮಾಣೈ ಸೇತುವೆ ಬಳಿಯೂ ಇಂದಿನಿಂದ ಡ್ರೆಡ್ಜಿಂಗ್ ಆರಂಭಿಸಲಾಗಿದೆ.

ಕೆಲ ದಿನಗಳಿಂದ ಮಾಣೈ ಬಳಿ ಎರಡು ಬೋಟುಗಳಲ್ಲಿ ಡ್ರೆಡ್ಜಿಂಗ್ ನಡೆಸ ಲಾಗುತ್ತಿದ್ದು, ಇದೀಗ ಈ ಪ್ರದೇಶದಲ್ಲಿ ನೀರು ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಹರಿವಿಗೆ ತಡೆಯಾಗಬಾರದೆಂಬ ಉದ್ದೇಶದಿಂದ ಇಲ್ಲಿನ ಒಂದು ಬೋಟನ್ನು ಮಾಣೈ ಸೇತುವೆ ಬಳಿಗೆ ವರ್ಗಾಯಿಸಿ ಅಲ್ಲಿಂದಲೂ ನೀರನ್ನು ಡ್ರೆಡ್ಜಿಂಗ್ ಮಾಡಲಾಗುತ್ತಿದೆ.

‘ಸ್ವರ್ಣ ನದಿಯಲ್ಲಿ ನೀರು ಬಜೆ ಅಣೆಕಟ್ಟಿನ ಜಾಕ್‌ವೆಲ್‌ಗೆ ಹರಿದು ಬರು ತ್ತಿದ್ದು, ಮೂರು ವಾರಗಳಿಗೆ ಬೇಕಾದಷ್ಟು ನೀರಿನ ಸಂಗ್ರಹವಿದೆ. ಬಜೆ ಡ್ಯಾಂನಲ್ಲಿ ಇಂದು ಬೆಳಗಿನ ಜಾವ 4ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಮತ್ತು ಸಂಜೆ 4ಗಂಟೆಯಿಂದ ರಾತ್ರಿಯವರೆಗೆ ಪಂಪಿಂಗ್ ಮಾಡಲಾಗಿದೆ’ ಎಂದು ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಉಡುಪಿ ನಗರಸಭೆಯ ಐದನೆ ವಿಭಾಗಕ್ಕೆ ನೀರು ಪೂರೈಕೆ ಮಾಡಲಾಗಿದ್ದು, ನೀರು ಬಾರದ ಇಂದ್ರಾಳಿ, ಕುಂಜಿಬೆಟ್ಟು, ಮಂಚಿ ಕೋಡಿ ಪ್ರದೇಶಗಳ 9 ಕಡೆ ಗಳಿಗೆ ಆರು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗಿದೆ. ಉಳಿದಂತೆ ಎಲ್ಲೂ ನೀರಿಗೆ ಸಮಸ್ಯೆಯಾಗಿಲ್ಲ ಎಂದು ಅವರು ತಿಳಿಸಿದರು.

ಕಾರ್ಕಳ ಪುರಸಭೆಯ ಒಟ್ಟು 23 ವಾರ್ಡ್‌ಗಳ ಪೈಕಿ ಐದು ವಾರ್ಡ್‌ಗಳಿಗೆ ಎರಡು ದಿನಗಳಿಗೊಮ್ಮೆ ಹಾಗೂ ಉಳಿದ 18 ವಾರ್ಡ್‌ಗಳಿಗೆ ಮೂರು ದಿನ ಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿಗೆ ಮುಂಡ್ಲಿ ನದಿಯ ರಾಮ ಸಮುದ್ರದಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಉಳಿದ ಸ್ಥಳೀಯಾಡಳಿತ ಸಂಸ್ಥೆಗಳಾದ ಕುಂದಾಪುರ, ಸಾಲಿಗ್ರಾಮ ಹಾಗೂ ಕಾಪುವಿನಲ್ಲಿ ನೀರಿನ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ ಎಂದು ಅವರು ಹೇಳಿದರು.

ಇಂದು ನೀರು ಪೂರೈಸುವ ಪ್ರದೇಶ

ಉಡುಪಿ ನಗರಸಭೆ ವ್ಯಾಪ್ತಿಯ ಬನ್ನಂಜೆ, ಮಠದಬೆಟ್ಟು, ಬನ್ನಂಜೆ ಗರಡಿ ರಸ್ತೆ, ಹಳೇ ಜಿಲ್ಲಾಧಿಕಾರಿ ಕಚೇರಿ ಹಿಂಬದಿ, ಕಾಡಬೆಟ್ಟು, ಜಗನ್ನಾಥ ಮಾರ್ಗ, ಕೊಲಾ ರೋಡ್, ಬ್ರಹ್ಮಗಿರಿ, ಗಾಂಧಿ ನಗರ, ಸಿಪಿಸಿ ಲೇಔಟ್, ಅಂಬಲ ಪಾಡಿ, ಕರಾವಳಿ ಬೈಪಾಸ್‌ವರೆಗೆ, ಕಾಳಿಕಾಂಬ ನಗರ, ಕನ್ನರ್ಪಾಡಿ ಪ್ರದೇಶ ಗಳಿಗೆ ಮೇ 18ರಂದು ನೀರು ಸರಬರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News