ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2019-05-18 16:35 GMT

ಬ್ರಹ್ಮಾವರ, ಮೇ 18: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಮುಹಮ್ಮದ್ ಫಾರೂಕ್ ಎಂಬವರ ಪತ್ನಿ ರಝಿಯಾ ಬಾನು(26) ಎಂಬವರು ಸಾಸ್ತಾನದಲ್ಲಿ ರುವ ತನ್ನ ತವರುಮನೆಯ ಬೆಡ್‌ರೂಂನಲ್ಲಿ ಮೇ 17ರಂದು ಸಂಜೆ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ, ಮೇ 18: ವೈಯಕ್ತಿಕ ಕಾರಣದಿಂದ ಮನನೊಂದ ಕರ್ಕುಂಜೆ ಗ್ರಾಮದ ಹಿಲ್ಕೋಡು ನಿವಾಸಿ ರಾಜು ಪೂಜಾರಿ(46) ಎಂಬವರು ಮೇ 16ರಂದು ಬೆಳಗ್ಗೆ 6ಗಂಟೆಯಿಂದ 17ರ ಬೆಳಗ್ಗೆ 8ಗಂಟೆ ಮಧ್ಯಾವಧಿಯಲ್ಲಿ ಮನೆಯ ಹಿಂಬದಿಯ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News