ಅಕ್ರಮ ಮರಳು ಸಾಗಾಟ: ಮೂರು ಲಾರಿ ವಶ

Update: 2019-05-18 16:45 GMT

ಪಡುಬಿದ್ರಿ, ಮೇ 18: ಮಂಗಳೂರು ಕಡೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಯನ್ನು ಪಡುಬಿದ್ರೆ ಪೊಲೀಸರು ಬಡಾ ಗ್ರಾಮದ ಬುದಗಿ ಪೆಟ್ರೋಲ್ ಪಂಪ್ ಬಳಿ ಮೇ 17ರಂದು ರಾತ್ರಿ ವೇಳೆ ವಶಪಡಿಸಿಕೊಂಡಿದ್ದಾರೆ.

ಎರಡು ಲಾರಿಗಳ ಚಾಲಕರು ಪೊಲೀಸರ ಕಾರ್ಯಾಚರಣೆ ವೇಳೆ ಇಳಿದು ಓಡಿ ಹೋಗಿದ್ದಾರೆ. ಈ ಎರಡು ಲಾರಿಗಳನ್ನು ಅದರಲ್ಲಿದ್ದ 45ಸಾವಿರ ರೂ. ಮೌಲ್ಯದ ಒಟ್ಟು 45 ಟನ್ ಮರಳು ಸಹಿತ ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಮಂಗಳೂರಿನಿಂದ ಉಡುಪಿ ಕಡೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕಾಪು ಪೊಲೀಸರು ಮೇ 17ರಂದು ಕಟಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಶಪಡಿಸಿಕೊಂಡಿದ್ದಾರೆ.

ಲಾರಿ ಚಾಲಕ ರವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಾರಿ ಯನ್ನು ಅದರಲ್ಲಿದ್ದ 17,000 ರೂ. ಮೌಲ್ಯದ 13 ಟನ್ ಮರಳು ಸಹಿತ ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News