ಮಳೆಗಾಗಿ ಕದ್ರಿಯಲ್ಲಿ ಪರ್ಜನ್ಯ ಜಪ, ರುದ್ರ ಪಾರಾಯಣ
Update: 2019-05-18 22:49 IST
ಮಂಗಳೂರು, ಮೇ 18: ಕರಾವಳಿಯ ಜಿಲ್ಲೆಗಳಲ್ಲಿ ಕಾಣಿಸಿರುವ ಜಲಕ್ಷಾಮವನ್ನು ದೂರ ಮಾಡುವ ಸಲುವಾಗಿ ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ಶನಿವಾರ ಕದ್ರಿ ಮಂಜುನಾಥ ದೇವಳದ ಕೆರೆಯ ಪ್ರಾಂಗಣದಲ್ಲಿ ವರುಣ ದೇವರ ಪ್ರೀತ್ಯರ್ಥ ಪರ್ಜನ್ಯ ಜಪ, ರುದ್ರ ಪಾರಾಯಣ ವಿಷ್ಣುಸಹಸ್ರನಾಮ ಪಠಣ ನಡೆಸಲಾಯಿತು.
ಕದ್ರಿ ದೇವಳದ ಅರ್ಚಕ ರಾಘವೇಂದ್ರ ಅಡಿಗ , ಡಾ. ಪ್ರಭಾಕರ ಅಡಿಗ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ನಾರಾಯಣ ಕಂಜರ್ಪಣೆ, ಸುಧಾಕರ ರಾವ್ ಪೇಜಾವರ, ರಾಮಕೃಷ್ಣ, ನಂದಳಿಕೆ ಬಾಲಚಂದ್ರ ರಾವ್, ಶ್ರೀಕಾಂತ್ ಸುಬ್ರಹ್ಮಣ್ಯ ಸಭಾ, ಶ್ರೀಧರ ಐತಾಳ, ರಘುರಾಮ ಲ್ಯಾಂಡ್‌ಲಿಂಕ್ಸ್ , ಎಲ್ಲೂರು ರಾಮಚಂದ್ರ ಭಟ್, ಕೃಷ್ಣ ಭಟ್ ಕೆ., ಕೆ. ವಾಸುದೇವ ಭಟ್ , ಗಣೇಶ್ ಹೆಬ್ಬಾರ್, ಜಿತೇಂದ್ರ ಕುಂದೇಶ್ವರ, ರಾಮ ಹೊಳ್ಳ, ದಿನೇಶ್ ದೇವಾಡಿಗ ಕದ್ರಿ, ಅರುಣ್ ಕುಮಾರ್ ಕದ್ರಿ, ರೂಪಾ ಡಿ. ಬಂಗೇರ, ಅಶೋಕ ಡಿ.ಕೆ. ಮತ್ತಿತರರು ಪಾಲ್ಗೊಂಡರು.