ಮಂಗಳೂರಿನಲ್ಲಿ ಆಕಾಶ್ ಇನ್‌ಸ್ಟಿಟ್ಯೂಟ್‌ನ ಶಾಖೆ ಆರಂಭ

Update: 2019-05-18 17:24 GMT

ಮಂಗಳೂರು, ಮೇ 18: ಇಂಜಿನಿಯರಿಂಗ್ ಮತ್ತು ಮೆಡಿಕಲ್ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ದೆಹಲಿ ಮೂಲದ ಆಕಾಶ್ ಇನ್‌ಸ್ಟಿಟ್ಯೂಟ್ ಮಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ.

ನಗರದ ಕೆ.ಎಸ್.ರಸ್ತೆಯಲ್ಲಿರುವ ಮಿಸ್ಟ್  ಮಾಲ್‌ನ 2 ನೇ ಮಹಡಿಯಲ್ಲಿ ಈ ಕೋಚಿಂಗ್ ಕೇಂದ್ರ ಶುಭಾರಂಭಗೊಂಡಿದ್ದು, ನೂತನ ಕೇಂದ್ರವನ್ನು ಶುಕ್ರವಾರ ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್‌ನ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಆಕಾಶ್ ಎಜುಕೇಶನ್ ಸರ್ವಿಸಸ್ ಮಂಗಳೂರಿನಲ್ಲಿ ಈ ಸಂಸ್ಥೆಯನ್ನು ತೆರೆಯುತ್ತಿರುವುದು ಹರ್ಷದ ವಿಷಯ. ನಗರದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು ಮತ್ತು ಫೌಂಡೇಶನ್-ಲೆವೆಲ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಪರಿಪೂರ್ಣವಾದ ಕೋಚಿಂಗ್ ಇಲ್ಲಿ ದೊರೆಯಲಿದೆ. ಈ ಪರೀಕ್ಷೆಗಳು ಸ್ಕೂಲ್ ಬೋರ್ಡ್ಸ್, ಎನ್‌ಟಿಎಸ್‌ಇ, ಒಲಿಂಪಿಯಾಡ್ ಸೇರಿದಂತೆ ಇನ್ನೂ ಹಲವಾರು ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ತರಬೇತಿ ನೀಡಲಿದೆ ಎಂದರು.

ಈ ಕೇಂದ್ರದಿಂದ ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಸಂಸ್ಥೆಯ ನಿರ್ದೇಶಕ ಆಕಾಶ್ ಚೌಧರಿ ನೇತೃತ್ವದಲ್ಲಿ ಗುಣಮಟ್ಟದ ಕೋಚಿಂಗ್ ಈ ಕೇಂದ್ರದಲ್ಲಿ ದೊರೆಯಲಿದೆ. ಐಐಟಿಗಳು, ಎನ್‌ಐಟಿಗಳು, ಎಐಐಎಂಎಸ್ ಮತ್ತು ಇತರೆ ವೈದ್ಯಕೀಯ ಕಾಲೇಜು ಗಳ ಬಹು ದಿನಗಳ ಬೇಡಿಕೆಯನ್ನು ಆಕಾಶ್ ಇನ್‌ಸ್ಟಿಟ್ಯೂಟ್‌ನ ಕೇಂದ್ರ ಪೂರೈಸಲಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News