ಕಟೀಲ್ ಹೇಳಿಕೆ ಜಿಲ್ಲೆಯ ಜನತೆಯ ಅವಹೇಳನ: ಸಿಪಿಐ

Update: 2019-05-18 17:31 GMT

ಮಂಗಳೂರು, ಮೇ 18: ಹಿಂದೊಮ್ಮೆ ‘ದ.ಕ. ಜಿಲ್ಲೆಗೆ ಬೆಂಕಿ ಹಚ್ಚಲಿದ್ದೇವೆ’ ಎಂದು ಹೇಳಿ ದೇಶಾದ್ಯಂತ ಪ್ರತಿಭಟನೆ ಎದುರಿಸಿದ ಸಂಸದ ನಳಿನ್‌ ಕುಮಾರ್ ಕಟೀಲ್ ಈಗ ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಿರುವುದು, ಅವರನ್ನು ಆರಿಸಿ ಕಳುಹಿಸಿರುವ ಜಿಲ್ಲೆಯ ಜನತೆಗೆ ಮಾಡಿದ ಅವಹೇಳನವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಆಕ್ರೋಶ ವ್ಯಕ್ತಪಡಿಸಿದೆ.

ಎರಡು ಬಾರಿ ಸಂಸದರಾಗಿ ಜಿಲ್ಲೆಗೆ ಯಾವುದೇ ಒಳ್ಳೆಯ ಕೆಲಸ ಮಾಡದಿದ್ದರೂ ಇಂತಹ ರಾಷ್ಟ್ರವಿರೋಧಿ ಹೇಳಿಕೆ ನೀಡಿ ಪ್ರಚಾರದಲ್ಲಿ ಇರುವಂತೆ ನಡೆಯುವ ಸಂಸದರನ್ನು ಜಿಲ್ಲೆ ಇದುವರೆಗೂ ಕಂಡಿಲ್ಲ. ಇಂತಹರನ್ನು ಮತ್ತೊಮ್ಮೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದು ದೇಶದ ಇಂದಿನ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿಕೆಯು ರಾಷ್ಟ್ರಪಿತ ಗಾಂಧೀಜಿಯವರ ಅವಹೇಳನವಾಗಿದ್ದು, ಇದನ್ನು ದೇಶದ್ರೋಹದ ಕಾನೂನುಗಳ ಅಡಿಯಲ್ಲಿ ಪರಿಗಣಿಸಿ, ಸರಕಾರ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News