ಪಣಂಬೂರಿನಲ್ಲಿ ಮಕ್ಕಳ ಸರ್ಫಿಂಗ್ ಸ್ಪರ್ಧೆ

Update: 2019-05-19 08:48 GMT

ಮಂಗಳೂರು, ಮೇ 19:ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪಣಂಬೂರು ಕಡಲಲ್ಲಿ ರವಿವಾರ ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನದವರೆಗೆ ಮಕ್ಕಳ ಸರ್ಫಿಂಗ್ ಸ್ಪರ್ಧೆ ಜರುಗಿತು.

ಸರ್ಫಿಂಗ್ ಸ್ವಾಮಿ ಫೌಂಡೇಶನ್, ಮಂತ್ರ ಸರ್ಫ್ ಕ್ಲಬ್, ಅಡ್ವೆಂಚರ್ ವರ್ಕ್ಸ್, ಥಂಡರ್ ಮಂಕಿ, ಫೈಯರ್ ವೈರ್ ಸರ್ಫ್ ಬೋರ್ಡ್ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ‘ಮಂತ್ರ ಗ್ರೋಮ್ ಸರ್ಚ್’ ಸ್ಪರ್ಧೆಯಲ್ಲಿ ಮುಲ್ಕಿ, ಪಣಂಬೂರು, ತಣ್ಣೀರುಬಾವಿ, ಬೆಂಗರೆ ಪರಿಸರದಲ್ಲಿ ಕಾರ್ಯಾಚರಿಸುವ ಕ್ಲಬ್‌ಗಳ 50ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.

ಸಾಹಸಮಯ ಮಕ್ಕಳ ಸರ್ಫಿಂಗ್ ಸ್ಪರ್ಧೆಯನ್ನು ವೀಕ್ಷಿಸಲು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News