'ತಾಳಮದ್ದಲೆ ಪುರಾಣವನ್ನು ಸುಂದರವಾಗಿ ನಿರೂಪಿಸುವ ಕಲೆ'

Update: 2019-05-19 13:10 GMT

ಉಡುಪಿ, ಮೇ 19: ಪುರಾಣದಲ್ಲಿರುವುದನ್ನು ಇಂದಿನ ಕಾಲಕ್ಕೆ ಸರಿಯಾಗಿ ಸುಂದರವಾಗಿ ನಿರೂಪಣೆ ಮಾಡುವ ವಿಶಿಷ್ಟ ಕಲೆ ತಾಳಮದ್ದಲೆ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗವು ಪರ್ಯಾಯ ಪಲಿಮಾರು ಮಠ, ಉಡುಪಿ ಶ್ರೀಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ಯೋಗದೊಂದಿಗೆ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ತಾಳಮದ್ದಲೆ ಸಪ್ತಾಹ ವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತಾಳಮದ್ದಲೆಯಲ್ಲಿ ಕಲಾವಿದ ವ್ಯಕ್ತಿಯನ್ನು ಮರೆತು ಆ ಪಾತ್ರವನ್ನು ಕಲ್ಪಿಸ ಲಾಗುತ್ತದೆ. ಹಾಗಾಗಿ ಸಭಿಕರು ಆ ಪಾತ್ರಧಾರಿ ಹೇಳುವು ದನ್ನೆಲ್ಲವನ್ನು ನಂಬು ತ್ತಾರೆ. ಆದುದರಿಂದ ಈ ಕಲೆಯು ತುಂಬಾ ಜವಾಬ್ದಾರಿಯುತ ಮಾತು ಗಾರಿಕೆಯ ಕಲೆ ಕೂಡ ಆಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇಂದು ಯಕ್ಷಗಾನ ಹಾಗೂ ತಾಳಮದ್ದಲೆ ತುಂಬಾ ಬೇಡಿಕೆ ಇರುವ ಕಲೆಯಾಗಿದೆ. ಜೀವಕಲೆಯಾಗಿರುವ ತಾಳಮದ್ದಲೆ ಮನಸ್ಸಿಗೆ ಸಂತೋಷ ಕೊಡುವ ಅಪೂರ್ವ ಕಲೆ. ಇದರಲ್ಲಿ ಬಣ್ಣ ಹಚ್ಚದಿದ್ದರೂ ಕಲಾವಿದರ ಮಾತು ಕೇಳುವುದೇ ಒಂದು ಸೊಗಸು ಎಂದರು.

ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಭಾಸ್ಕರ ಹಂದೆ ಶುಭಾ ಶಂಸನೆಗೈದರು. ಕಟೀಲು ದೇವಳದ ಅನುವಂಶಿಕ ಅರ್ಚಕ ವೆಂಕಟರಮಣ ಅಸ್ರಣ್ಣ, ಎಡನೀರು ಮಠದ ಕಾರ್ಯದರ್ಶಿ ಜಯರಾಮ ಎಡನೀರು ಮುಖ್ಯ ಅತಿಥಿಗಳಾಗಿದ್ದರು.

ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್, ಕಾರ್ಯದರ್ಶಿ ಮುರಲಿ ಕಡೆ ಕಾರ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಗಂಗಾಧರ ರಾವ್ ಸ್ವಾಗತಿಸಿದರು. ಗಣೇಶ್ ರಾವ್ ವಂದಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂ ಪಿಸಿದರು. ಬಳಿಕ ‘ಧ್ರುವ’ ತಾಳಮದ್ದಲೆ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News