×
Ad

ಉಡುಪಿ ನಗರಸಭೆ ಆರನೆ ವಿಭಾಗಕ್ಕೆ ನೀರು ಪೂರೈಕೆ

Update: 2019-05-19 20:57 IST

ಉಡುಪಿ, ಮೇ 19: ಉಡುಪಿ ನಗರಸಭೆಯ ಆರನೆ ವಿಭಾಗಕ್ಕೆ ಇಂದು ನೀರು ಪೂರೈಕೆ ಮಾಡಲಾಗಿದ್ದು, ನೀರು ಬಾರದ ಸರಳಬೆಟ್ಟು ಹಾಗೂ ಕರಂಬಳ್ಳಿ ವಾರ್ಡ್‌ಗಳಿಗೆ ಎರಡು ಟ್ಯಾಂಕರ್‌ಗಲ್ಲಿ ನೀರು ಪೂರೈಕೆ ಮಾಡಲಾಗಿದೆ.

ನಗರಸಭೆ ವ್ಯಾಪ್ತಿಯ ಕಲ್ಮಾಡಿ, ಬಂಕೇರಕಟ್ಟ, ಪಡುಕೆರೆ, ಶಾಂತಿನಗರ, ಕಲ್ಮಾಡಿ ಚರ್ಚ್ ಹಿಂಬದಿ, ಕೊಡವೂರು, ಕಾನಂಗಿ, ಕೊಡವೂರು- ಮೂಡ ಬೆಟ್ಟು ರಸ್ತೆ,. ಬಾಪುತೋಟ, ಶಸಿತೋಟ, ಮಲ್ಪೆ ಸೆಂಟ್ರಲ್, ಕೊಳ, ನೇರ್ಗಿ, ವಡಭಾಂಡೇಶ್ವರ, ಮಲ್ಪೆ ಬೀಚ್, ಪಾಳೆಕಟ್ಟೆ, ಕಾನಂಗಿ, ಚಿನ್ನಂಗಡಿ, ಹೆಬ್ಬಾರ್ ಮಾರ್ಗ, ಕೊಡವೂರು ಪೇಟೆಗಳಿಗೆ ಮೇ 20ರಂದು ನೀರು ಸರಬರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News