ಮೂತ್ರ ಜನಕಾಂಗ ರೋಗಗಳ ಆಯುರ್ವೇದ ಚಿಕಿತ್ಸಾ ಶಿಬಿರ
Update: 2019-05-19 21:01 IST
ಉಡುಪಿ, ಮೇ 19: ಮೂತ್ರ ಜನಕಾಂಗಗಳ ರೋಗಗಳ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಉಡುಪಿಯ ನ್ಯಾಷನಲ್ ಇನ್ಶುರೆನ್ಸ್ ಬಳಿಯ ಖುಷಿ ಆಯುರ್ಕೇರ್ನಲ್ಲಿ ರವಿವಾರ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉಧ್ಘಾಟಿಸಿದ ಉಡುಪಿ ಆಯುಷ್ ಫೆಡೆರೇಷನ್ ಜಿಲ್ಲಾಧ್ಯಕ್ಷ ಡಾ.ಎನ್.ಟಿ.ಅಂಚನ್, ಆಯುರ್ವೇದ ಚಿಕಿತ್ಸೆಯಿಂದ ಮೂತ್ರ ಜನಕಾಂಗಗಳ ಪುನರುಜ್ಜೀವನ ಸಾಧ್ಯವಿದೆ ಎಂದು ತಿಳಿಸಿದರು.
ಉಡುಪಿ ವಿದ್ಯೋದಯ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ನಾಗರಾಜ್ ಬಲ್ಲಾಲ್ ಮಾತನಾಡಿ, ಮೂತ್ರ ಜನಕಾಂಗಗಳ ರೋಗಗಳಿಗೆ ಆಯುರ್ವೇದ ಚಿಕಿತ್ಸೆ ಕುರಿತು ನಡೆಯುತ್ತಿರುವ ಸಂಶೋಧನೆಗಳು ಸ್ವಾಗತಾರ್ಹ ಎಂದು ಹೇಳಿದರು.
ಶಿಬಿರ ಸಂಯೋಜಕ ಡಾ.ವಿಜಯೇಂದ್ರ ಭಟ್ ಹಾಗೂ ಡಾ. ನಿವೇದಿತಾ ಉಪಸ್ಥಿತರಿದ್ದರು.