ಯಕ್ಷಗಾನ ಕಲಾವಿದ ದಾಸಪ್ಪ ರೈಗೆ ಮಾಧವ ಶೆಟ್ಟಿ ಸ್ಮಾರಕ ಪ್ರಶಸ್ತಿ

Update: 2019-05-19 15:35 GMT

ಪುತ್ತೂರು : ತೆಂಕುತೆಟ್ಟು ಯಕ್ಷಗಾನ ರಂಗದ ವೇಷಧಾರಿ ಮತ್ತು ಅರ್ಥಧಾರಿಯಾಗಿದ್ದ ಮೂಡಬಿದ್ರೆಯ ದಿ.ಮಾಧವ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ಬಪ್ಪಳಿಗೆಯ ಕೆ.ಎಚ್.ದಾಸಪ್ಪ ರೈ ಅವರನ್ನು ಆಯ್ಕೆ ಮಾಡಲಾಗಿದೆ.

ಮೂಡಬಿದ್ರೆ ದಿ.ಮಾಧವ ಶೆಟ್ಟಿ ಸಂಸ್ಮರಣಾ ವೇದಿಕೆ ಶಿಮಂತೂರು ಸಂಘಟನೆಯು ಯಕ್ಷ ಸಂಗಮದ ಆಶ್ರಯದಲ್ಲಿ ಮೇ.21ರಂದು ಮೂಡುಬಿದ್ರೆಯ ಸಮಾಜ ಮಂದಿರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕೆ.ಎಚ್. ದಾಸಪ್ಪ ರೈ ಅವರು ಹಲವು ವರ್ಷಗಳಿಂದ ವೇಷಧಾರಿಯಾಗಿ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗಸ್ಥಳದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾಸೇವೆ ಮಾಡಿದ್ದಾರೆ. ಯಕ್ಷಗಾನ ಮೇಳವೊಂದನ್ನು ಹುಟ್ಟು ಹಾಕಿ ಕೆಲವು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು. ಯಕ್ಷರಂಗದ ಸುದೀರ್ಘ ಸೇವೆಯನ್ನು ಗುರುತಿಸಿ ಇದೀಗ ಅವರನ್ನು ಮಾಧವ ಶೆಟ್ಟಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News