ಇಬ್ಬರು ಅಪರಿಚಿತ ವ್ಯಕ್ತಿಗಳ ಶವ ಪತ್ತೆ

Update: 2019-05-19 15:54 GMT

ಮಂಗಳೂರು, ಮೇ 19: ನಗರದ ಪಾಂಡೇಶ್ವರ ಮತ್ತು ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ಶವ ಪತ್ತೆಯಾಗಿದೆ. ಸರಕಾರಿ ವೆನ್ಲಾಕ್ ಆಸ್ಪತ್ರೆಯ ಶವಾಗಾರ ಎದುರು ಫುಟ್‌ಪಾತ್‌ನಲ್ಲಿ 40 ರಿಂದ 50ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಶವಾಗಾರದಲ್ಲಿಡಲಾಗಿದೆ.

ಚಹರೆ: 5.5ಅಡಿ ಎತ್ತರ, ಕಪ್ಪು ಮೈಬಣ್ಣ, ಕಪ್ಪುಪ್ಯಾಂಟ್ ಹಾಗೂ ಪೂರ್ಣ ತೋಳಿನ ನೀಲಿ ಗೆರೆಗಳಿರುವ ಶರ್ಟ್ ಧರಿಸಿದ್ದಾರೆ.
ಉರ್ವ ಮಾರ್ಕೆಟ್ ಸಮೀಪ ರವಿವಾರ ಮಧ್ಯಾಹ್ನ ವೇಳೆ 40ರಿಂದ 45ವರ್ಷ ಪ್ರಾಯದ ವ್ಯಕ್ತಿಯ ಶವ ಪತ್ತೆಯಾಗಿದೆ.

ಮಾರ್ಕೆಟ್ ಸಮೀಪ ಮಲಗಿರುವ ಈತನನ್ನು ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದೆ. ಇವರು ಕಳೆದ ಹಲವು ಸಮಯದಿಂದ ಉರ್ವ ಮಾರ್ಕೆಟ್ ಸುತ್ತಮುತ್ತ ತಿರುಗಾಡುತ್ತಿದ್ದರೆಂದು ತಿಳಿದು ಬಂದಿದೆ.

ಪಾಂಡೇಶ್ವರ ಹಾಗೂ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಸುದಾರರಿದ್ದಲ್ಲಿ ನಗರ ಕಂಟ್ರೋಲ್ ರೂಂ ಅಥವಾ ಠಾಣೆಗಳನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News