ಮಂಗಳೂರು: ಮೇ 20ರಿಂದ ನಾಲ್ಕು ದಿನ ನೀರು ಪೂರೈಕೆ ಸ್ಥಗಿತ

Update: 2019-05-19 16:06 GMT

ಮಂಗಳೂರು, ಮೇ 19: ನೀರು ರೇಷನಿಂಗ್ ಕುರಿತಾದ ಜಿಲ್ಲಾಡಳಿತದ ಈ ಹಿಂದಿನ ಪರಿಷ್ಕೃತ ವೇಳಾಪಟ್ಟಿಯಂತೆ ಸೋಮವಾರದಿಂದ ತುಂಬೆಯಲ್ಲಿ ಪಂಪಿಂಗ್ ಸ್ಥಗಿತಗೊಳ್ಳಲಿದ್ದು, ಮುಂದಿನ ನಾಲ್ಕು ದಿನಗಳವರೆಗೆ ನಗರಕ್ಕೆ ನೀರು ಪೂರೈಕೆಯಾಗುವುದಿಲ್ಲ. ಮೊದಲ ಬಾರಿಗೆ ನಾಲ್ಕು ದಿನ ಪಂಪಿಂಗ್ ನಿಲ್ಲಿಸಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ರವಿವಾರ ಬಹುತೇಕ ಪ್ರದೇಶಕ್ಕೆ ನೀರು ಪೂರೈಕೆಯಾಗಿದ್ದು, ಪಾಲಿಕೆ ಟ್ಯಾಂಕರ್ ನೀರಿಗೆ ಬೇಡಿಕೆ ಕಡಿಮೆ ಇತ್ತು. ನಗರಾದ್ಯಂತ ಹಲವು ಮದುವೆ ಸಮಾರಂಭಗಳು ನಡೆದ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂತು.

ಕಳೆದ ನಾಲ್ಕು ದಿನಗಳ ನಿರಂತರ ನೀರು ಪೂರೈಕೆಯ ನಂತರ ತುಂಬೆಯಲ್ಲಿ ನೀರಿನ ಮಟ್ಟ 3.53 ಮೀ.ಗೆ ಇಳಿಕೆಯಾಗಿದೆ. ನಗರ ವ್ಯಾಪ್ತಿಯಲ್ಲಿರುವ ಟ್ಯಾಂಕ್‌ಗಳನ್ನು ರಾತ್ರಿ ವೇಳೇ ತುಂಬಿಸಿ, ಸೋಮವಾರ ಬೆಳಗ್ಗೆ 6 ಗಂಟೆಗೆ ಪಂಪಿಂಗ್ ಸ್ಥತಗೊಳಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ನೀರನ್ನು ಮುಂದಿನ ದಿನಗಳಲ್ಲಿ ನಿಗದಿತ ವೇಳೆಯಲ್ಲಿ ಆಯಾ ಪ್ರದೇಶಕ್ಕೆ ವಿತರಿಸಲು ಪಾಲಿಕೆ ನಿರ್ಧರಿಸಿದೆ.

12-14ದಿನಕ್ಕೆ ನೀರು: ತುಂಬೆಯಲ್ಲಿ ಪ್ರಸ್ತುತ ಸಂಗ್ರಹವಿರುವ ನೀರು ಮುಂದಿನ 12ರಿಂದ 14 ದಿನಗಳಿಗೆ ಮಾತ್ರ ಸಾಕಾಗಬಹುದು. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ನೀರಿನ ಸಮಸ್ಯೆ ಬಿಗಡಾಯಿಸುವ ಸಾಧ್ಯತೆಯಿದೆ. ಘಟ್ಟದ ತಪ್ಪಲಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗು ತ್ತಿದ್ದರೂ, ನೇತ್ರಾವತಿಯಲ್ಲಿ ನೀರಿನ ಹರಿವು ಉಂಟಾಗಿಲ್ಲ. ತುಂಬೆಯಲ್ಲಿ ನೀರು ತಳಮಟ್ಟಕ್ಕೆ ತಲುಪಿರುವುದರಿಂದ ಫಿಲ್ಟರ್ ಹಾಗೂ ಪಂಪಿಂಗ್ ಮಾಡಲು ಸಮಸ್ಯೆಯೂ ಆಗುತ್ತಿದೆ. ಹೂಳು ಕೂಡ ಸಾಕಷ್ಟು ತುಂಬಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News