ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ

Update: 2019-05-19 16:27 GMT

ಹೆಬ್ರಿ, ಮೇ 19: ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಹೆಬ್ರಿ ಪೊಲೀಸರು ಶಿವಪುರ ಗ್ರಾಮದ ನಾಯರ್ಕೋಡ್ ಕ್ರಾಸ್ ಬಳಿ ಮೇ 18ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ಕಟಪಾಡಿ ಸುಭಾಸ್ ನಗರ ನಿವಾಸಿ ಸಂದೇಶ(40) ಹಾಗೂ ಕರ್ಜೆಯ ಜಯಕರ ಶೆಟ್ಟಿ(75) ಬಂಧಿತ ಆರೋಪಿಗಳು. ಇವರಿಂದ ಗೂಡ್ಸ್ ಟೆಂಪೋ ವಾಹನ ಹಾಗೂ ನಾಲ್ಕು ಗಂಡು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News