ಉಸ್ಮಾನಿಯಾ ವಿ.ವಿ. ಲೈಬ್ರೆರಿಯ ಹೆಸರು ಬದಲಾವಣೆ: ಪ್ರತಿಭಟನೆ

Update: 2019-05-19 16:57 GMT

ಹೈದರಾಬಾದ್, ಮೇ 19: ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಲೈಬ್ರೆರಿಯ ಹೆಸರನ್ನು ಭಾರತ ರತ್ನ ಬಿ.ಆರ್. ಅಂಬೇಡ್ಕರ್ ಲೈಬ್ರೆರಿ ಎಂದು ಬದಲಾ ಯಿಸಿರುವುದಕ್ಕೆ ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಹೈದರಾಬಾದ್‌ನ 7ನೇ ನಿಜಾಮ ಮಿರ್ ಉಸ್ಮಾನ್ ಅಲಿ ಖಾನ್ ಹೆಸರನ್ನು ಇರಿಸಿದ ಬಳಿಕ ಈ ಲೈಬ್ರೆರಿಯನ್ನು ಉಸ್ಮಾನಿಯಾ ವಿಶ್ವವಿದ್ಯಾನಿಲಯ ಲೈಬ್ರೆರಿ ಎಂದು ಕರೆಯಲಾಗುತ್ತಿತ್ತು. ವಿಶ್ವವಿದ್ಯಾನಿಲಯದೊಂದಿಗೆ ಈ ಲೈಬ್ರೆರಿಯನ್ನು 1918ರಲ್ಲಿ ಆರಂಭಿಸಲಾಗಿತ್ತು. ಅನಂತರ ಈ ಲೈಬ್ರೆರಿಯನ್ನು ಇನ್ನೊಂದು ಕಟ್ಟಡಕ್ಕೆ ವರ್ಗಾಯಿಸಲಾಗಿತ್ತು. ಇದನ್ನು ರಾಷ್ಟ್ರಾಧ್ಯಕ್ಷ ಡಾ. ರಾಧಾಕೃಷ್ಣನ್ 1963ರಲ್ಲಿ ಉದ್ಘಾಟಿಸಿದ್ದರು.

ಲೈಬ್ರೆರಿಗೆ ಬಿ.ಆರ್. ಅಂಬೇಡ್ಕರ್ ಹೆಸರು ಇರಿಸುವ ನಿರ್ಧಾರ ಹಿಂದೆ ತೆಗೆದುಕೊಳ್ಳುವಂತೆ ಪ್ರತಿಭಟನೆ ನಡೆಯುತ್ತಿರುವ ನಡುವೆ ವಿಶ್ವವಿದ್ಯಾನಿಲಯ ಶತಮಾನೋತ್ಸವ ಆಚರಣೆಯ ಒಂದು ಭಾಗವಾಗಿ ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನವಾದ ಶುಕ್ರವಾರ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಸುಖ್‌ದೇವ್ ಥೋರಾಟ್ ಸಂಶೋಧನಾ ಕೇಂದ್ರ ಹಾಗೂ ಅಂಬೇಡ್ಕರ್ ಅವರ ಮೂರ್ತಿ ಉದ್ಘಾಟಿಸಿದ್ದರು.

 ಲೈಬ್ರೆರಿಯ ಹೆಸರು ಬದಲಾಯಿಸುವ ನಿರ್ಧಾರದ ಬಳಿಕ ಹಳೆಯ ವಿದ್ಯಾರ್ಥಿಗಳು, ಇತಿಹಾಸ ತಜ್ಞರು, ನಿಜಾಮ್ ಕುಟುಂಬದ ಸದಸ್ಯರು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಉಪ ಕುಲಪತಿ, ಮುಖ್ಯ ಕಾರ್ಯದರ್ಶಿ ಎಸ್.ಕೆ. ಜೋಷಿ ಹಾಗೂ ರಾಜ್ಯಪಾಲ ಇಎಸ್‌ಎಲ್ ನರಸಿಂಹ ಅವರಿಗೆ ಪತ್ರ ಬರೆದು ಈ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News