ಗೂಗಲ್‌ನಲ್ಲಿ ರಾಜಕೀಯ ಜಾಹೀರಾತಿಗೆ ಬಿಜೆಪಿ 17 ಕೋ. ರೂ. ಕಾಂಗ್ರೆಸ್ 2.27 ಕೋ. ರೂ. ವೆಚ್ಚ

Update: 2019-05-19 17:01 GMT

  ಹೊಸದಿಲ್ಲಿ, ಮೇ 19: ಫೆಬ್ರವರಿಯಿಂದ ಮೇ ವರೆಗೆ ಗೂಗಲ್ ಹಾಗೂ ಫೇಸ್‌ಬುಕ್‌ನಂತಹ ಡಿಜಿಟಲ್ ವೇದಿಕೆಯಲ್ಲಿ ಜಾಹೀರಾತು ಪ್ರಕಟಿಸಲು ರಾಜಕೀಯ ಪಕ್ಷಗಳು 53 ಕೋಟಿ ರೂಪಾಯಿ ವೆಚ್ಚ ಮಾಡಿವೆ. ಇದರಲ್ಲಿ ಸಿಂಹ ಪಾಲು ಬಿಜೆಪಿಯದ್ದು.

 ಈ ವರ್ಷ ಪೆಬ್ರವರಿ ಹಾಗೂ ಮೇ 15ರ ನಡುವೆ 26.5 ಕೋಟಿ ರೂಪಾಯಿಗೂ ಅಧಿಕ ವೆಚ್ಚದ 1.21 ಲಕ್ಷ ರಾಜಕೀಯ ಜಾಹೀರಾತುಗಳು ಪ್ರಕಟವಾಗಿವೆ ಎಂದು ಫೇಸ್‌ಬುಕ್ ಆ್ಯಡ್ಸ್ ಲೈಬ್ರೆರಿ ವರದಿ ಹೇಳಿದೆ.

ಅದೇ ರೀತಿ ಫೆಬ್ರವರಿ 19ರಿಂದ ಗೂಗಲ್, ಯುಟ್ಯೂಬ್ ಹಾಗೂ ಇತರ ಪಾಲುದಾರ ಸಂಸ್ಥೆಗಳಲ್ಲಿ 27.36 ಕೋಟಿ ರೂಪಾಯಿಯ 14,837 ಜಾಹೀರಾತುಗಳು ಪ್ರಕಟವಾಗಿವೆ.

ಫೇಸ್‌ಬುಕ್‌ನಲ್ಲಿ ಜಾಹೀರಾತು ಪ್ರಕಟಿಸಲು ಆಡಳಿತಾರೂಢ ಬಿಜೆಪಿ 2,500 ಜಾಹೀರಾತಿಗಾಗಿ 4.23 ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಭಾರತದಲ್ಲಿ 200 ದಶಲಕ್ಷಕ್ಕೂ ಅಧಿಕ ಬಳಕೆದಾರರಿರುವ ಸಾಮಾಜಿಕ ಜಾಲ ತಾಣದ ವೇದಿಕೆಯಲ್ಲಿ 'ಮೈ ಫಸ್ಟ್ ವೋಟ್ ಫಾರ್ ಮೋದಿ', 'ಭಾರತ್ ಕೆ ಮನ್ ಕಿ ಬಾತ್' ಹಾಗೂ 'ನೇಶನ್ ವಿತ್ ನಮೋ'ದಂತಹ ಬೆಂಬಲಿತ ಪುಟಗಳ ಜಾಹೀರಾತು ಹಾಕಲು 4 ಕೋಟಿ ರೂಪಾಯಿ ವೆಚ್ಚವಾಗಿದೆ. ಬಿಜೆಪಿ ಗೂಗಲ್ ವೇದಿಕೆಯಲ್ಲಿ 17 ಕೋಟಿ ರೂಪಾಯಿಗಿಂತಲೂ ಅಧಿಕ ವೆಚ್ಚ ಮಾಡಿದೆ.

ಫೇಸ್‌ಬುಕ್‌ನಲ್ಲಿ 3,686 ಜಾಹೀರಾತುಗಳನ್ನು ಪ್ರಕಟಿಸಲು ಕಾಂಗ್ರೆಸ್ 1.46 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಗೂಗಲ್ ವೇದಿಕೆಯಲ್ಲಿ 425 ಜಾಹೀರಾತುಗಳನ್ನು ಪ್ರಕಟಿಸಲು 2.71 ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಫೇಸ್‌ಬುಕ್ ದತ್ತಾಂಶದ ಪ್ರಕಾರ ಜಾಹೀರಾತು ಪ್ರಕಟಿಸಲು ತೃಣಮೂಲ ಪಕ್ಷ 29.28 ಲಕ್ಷ ರೂಪಾಯಿ. ಆಪ್ ಫೇಸ್‌ಬುಕ್‌ನಲ್ಲಿ 176 ಜಾಹೀರಾತುಗಳನ್ನು ಪ್ರಕಟಿಸಲು 13.62 ಲಕ್ಷ. ರೂಪಾಯಿ ವೆಚ್ಚ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News