ಆಸ್ಟ್ರೇಲಿಯ ಚುನಾವಣೆ: ಆಡಳಿತಾರೂಢ ಮಿತ್ರಕೂಟಕ್ಕೆ ಅಚ್ಚರಿಯ ಜಯ

Update: 2019-05-19 17:06 GMT

 ಕ್ಯಾನ್‌ಬೆರ (ಆಸ್ಟ್ರೇಲಿಯ), ಮೇ 19:ಶನಿವಾರ ನಡೆದ ಆಸ್ಟ್ರೇಲಿಯದ ಸಂಸದೀಯ ಚುನಾವಣೆಯಲ್ಲಿ, ಎಲ್ಲ ಸಮೀಕ್ಷೆಗಳನ್ನು ಧಿಕ್ಕರಿಸಿ ಆಡಳಿತಾರೂಢ ಕನ್ಸರ್ವೇಟಿವ್ ಮಿತ್ರಕೂಟ ಅಚ್ಚರಿಯ ಜಯ ದಾಖಲಿಸಿದೆ.

ಚುನಾವಣೆಯಲ್ಲಿ ಪ್ರತಿಪಕ್ಷ ಮಿತ್ರಕೂಟವು ಜಯಗಳಿಸುವುದೆಂದು ಚುನಾವಣಾ ಸಮೀಕ್ಷೆಗಳು ಹೇಳಿದ್ದವು.

‘‘ನಾನು ಪವಾಡಗಳಲ್ಲಿ ನಂಬಿಕೆ ಹೊಂದಿದ್ದೇನೆ’’ ಎಂಬುದಾಗಿ ವಿಜಯದ ಬಳಿಕ ಪ್ರಧಾನಿ ಸ್ಕಾಟ್ ಮೊರಿಸನ್ ಸಿಡ್ನಿಯಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಆಡಳಿತಾರೂಢ ಮಿತ್ರಕೂಟವು ಸೋಲುತ್ತದೆ ಎಂಬುದಾಗಿ ಚುನಾವಣಾ ಸಮೀಕ್ಷೆಗಳು ಹೇಳಿದ್ದವು.

76.16 ಶೇಕಡ ಮತಗಳ ಎಣಿಕೆ ಮುಗಿದಾಗ ಆಡಳಿತಾರೂಢ ಮಿತ್ರಕೂಟ 72 ಸ್ಥಸ್ಥಾನಗಳನ್ನು ಗೆದ್ದಿತ್ತು. ಪ್ರತಿಪಕ್ಷ ಲೇಬರ್ 63 ಸ್ಥಾನಗಳಲ್ಲಿ ವಿಜಯಿಯಾಗಿದೆ. 151 ಸದಸ್ಯ ಬಲದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸರಳ ಬಹುಮತಕ್ಕೆ 76 ಸ್ಥಾನಗಳ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News