×
Ad

ಆಸ್ಟ್ರಿಯ: ಭ್ರಷ್ಟಾಚಾರ ಆರೋಪದಲ್ಲಿ ವೈಸ್ ಚಾನ್ಸಲರ್ ರಾಜೀನಾಮೆ

Update: 2019-05-19 22:39 IST

ವಿಯೆನ್ನಾ (ಆಸ್ಟ್ರಿಯ), ಮೇ 19: ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ಆಸ್ಟ್ರಿಯದ ಉಪ ಚಾನ್ಸಲರ್ ಹೈಂಝ್-ಕ್ರಿಶ್ಚಿಯನ್ ಸ್ಟ್ರಾಶ್ ರಾಜೀನಾಮೆ ನೀಡಿದ ಬಳಿಕ, ಚಾನ್ಸಲರ್ ಸೆಬಾಸ್ಟಿಯನ್ ಕರ್ಝ್ ದೇಶದಲ್ಲಿ ಮಧ್ಯಾಂತರ ಚುನಾವಣೆಗೆ ಆದೇಶ ನೀಡಿದ್ದಾರೆ.

ಕರ್ಝ್‌ರ ಪೀಪಲ್ಸ್ ಪಾರ್ಟಿಯು ಸ್ಟ್ರಾಶ್‌ರ ಕಡು ಬಲಪಂಥೀಯ ಫ್ರೀಡಮ್ ಪಾರ್ಟಿಯೊಂದಿಗೆ ಸಮ್ಮಿಶ್ರ ಸರಕಾರ ನಡೆಸುತ್ತಿತ್ತು. ರಹಸ್ಯ ವೀಡಿಯೊ ತುಣುಕೊಂದು ಹೊರಬಿದ್ದ ಬಳಿಕ, ಫ್ರೀಡಂ ಪಾರ್ಟಿ ನಾಯಕ ಸ್ಟ್ರಾಶ್ ಉಪ ಚಾನ್ಸಲರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಶ್ಯದ ಹೂಡಿಕೆದಾರ ಎನ್ನಲಾದ ವ್ಯಕ್ತಿಯೊಬ್ಬನೊಂದಿಗೆ ಸರಕಾರಿ ಗುತ್ತಿಗೆಗಳ ಬಗ್ಗೆ ಅವರು ಚರ್ಚಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಸ್ಟ್ರಾಶ್ ರಾಜೀನಾಮೆ ನೀಡಿದ ಬಳಿಕ, ಮಧ್ಯಾಂತರ ಚುನಾವಣೆ ಅಗತ್ಯವಾಗಿದೆ ಎಂದು ಆಸ್ಟ್ರಿಯದ ಅಧ್ಯಕ್ಷ ಅಲೆಕ್ಸಾಂಡರ್ ವಾನ್ ಡರ್ ಬೆಲ್ಲನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News