ಬ್ರಿಟನ್ ಪುರಸಭೆಗೆ ಮೊದಲ ಸಿಖ್ ಮಹಿಳಾ ಕ್ಯಾಬಿನೆಟ್ ಸದಸ್ಯೆ

Update: 2019-05-19 17:46 GMT

ಲಂಡನ್, ಮೇ 19: ಮೇ 2ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವುಲ್ವರ್‌ಹ್ಯಾಂಪ್ಟನ್‌ನ ಹೀತ್ ಪಟ್ಟಣದಿಂದ ಆಯ್ಕೆಯಾದ ಜಸ್ಬೀರ್ ಜಸ್ಪಾಲ್‌ರನ್ನು ನೂತನ ನಾಯಕ ಇಯಾನ್ ಬ್ರೂಕ್ ಅವರು ಕೌನ್ಸಿಲ್‌ನ ಕ್ಯಾಬಿನೆಟ್‌ಗೆ ನೇಮಕ ಮಾಡಿದ್ದಾರೆ. ಇದರೊಂದಿಗೆ ಈ ಹುದ್ದೆಯನ್ನು ಪಡೆದ ಮೊದಲ ಸಿಖ್ ಮಹಿಳೆ ಅವರಾಗಿದ್ದಾರೆ.

ವುಲ್ವರ್‌ಹ್ಯಾಂಪ್ಟನ್ ಕೌನ್ಸಿಲ್‌ನಲ್ಲಿ 2012ರಿಂದ ಕೌನ್ಸಿಲರ್ ಆಗಿರುವ ಜಸ್ಪಾಲ್, ಪುನಶ್ಚೇತನ ಮತ್ತು ವ್ಯಾಪಾರ ಮುಂದುವರಿಕೆ, ಸಮುದಾಯ ಸುರಕ್ಷತೆ ಮತ್ತು ಬಾಂಧವ್ಯ, ಆರೋಗ್ಯಯುತ ಬೆಳವಣಿಗೆ ಮತ್ತು ಆರೋಗ್ಯಯುತ ಆಯುಷ್ಯ- ಈ ವಿಷಯಗಳಿಗೆ ಸಂಬಂಧಿಸಿದ ನೀತಿಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News