ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದಿಂದ ಪುಸ್ತಕ ವಿತರಣೆ

Update: 2019-05-20 16:59 GMT

ಮಂಗಳೂರು : ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಸಂಘ ಗುರುತಿಸಿ ಉಚಿತವಾಗಿ ಪುಸ್ತಕ ನೀಡುತ್ತಿದ್ದು, ಫಲಾನುಭವಿಗಳು ಉತ್ತಮ ರೀತಿಯಲ್ಲಿ ಬಳಕೆ ಮಾಡಬೇಕು. ಮುಂದೆ ಉನ್ನತ ಸ್ಥಾನ, ಉನ್ನತ ಹುದ್ದೆ ತಲುಪಿದಾಗ ತಾವು ಬಂದ ಹಾದಿಯನ್ನೂ ತಿರುಗಿ ನೋಡುವ ಮೂಲಕ ಇತರರಿಗೂ ಸಹಾಯ ಮಾಡುವ ಗುಣಸ್ವಭಾವವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಮಲಾರ್ ಹೇಳಿದರು.

ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಟಿ.ಎಚ್.ಹಮೀದ್, ಎಂ.ಎ.ಗಫೂರ್, ಎಸ್.ಎಂ.ಇಬ್ರಾಹೀಂ, ಬಿ.ಮುಹಮ್ಮದ್ ಶಾಲಿ, ಯು.ಟಿ.ಅಹ್ಮದ್ ಶರೀಫ್, ಮುಹಮ್ಮದ್ ಅಶ್ರಫ್, ಬಿ.ಇಬ್ರಾಹೀಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ಲತೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News