ಕೆನಡಾದಲ್ಲಿ ಮಿಂಚಿದ ಮಂಗಳೂರಿನ ಚೆಸ್ ಪ್ರತಿಭೆ ಆರನ್ ಮೆಂಡಿಸ್

Update: 2019-05-20 17:00 GMT

ಮಂಗಳೂರು, ಮೇ 20: ಇಲ್ಲಿನ ಡೆರಿಕ್ಸ್ ಚೆಸ್ ಸ್ಕೂಲಿನ ಪ್ರತಿಭೆ ಆರನ್ ರೀವ್ ಮೆಂಡಿಸ್ ಮೇ 11 ಹಾಗೂ 12ರಂದು ಕೆನಡಾದ ಓಂಟೋರಿಯೊದಲ್ಲಿ ಜರುಗಿದ ಓಂಟೋರಿಯೊ ರಾಜ್ಯ ಚೆಸ್ ಛಾಂಪಿಯನ್‌ಶಿಪ್‌ನ 8 ವರ್ಷದ ಬಾಲಕರ ಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಆರನ್ ರೀವ್ ಮೆಂಡಿಸ್ ಐದು ಸುತ್ತುಗಳಲ್ಲಿ ನಾಲ್ಕು ಅಂಕಗಳಿಸಿ, ದ್ವಿತೀಯ ಸ್ಥಾನವನ್ನು ಪಡೆದು, ತನ್ಮೂಲಕ ಜುಲೈನಲ್ಲಿ ನಡೆಯುವ ಕೆನಡಾ ರ್ಟ್ರೋಯ ಚೆಸ್ ಛಾಂಪಿಯನ್‌ಶಿಪ್‌ನ 8 ವರ್ಷದ ಬಾಲಕರ ಭಾಗದಲ್ಲಿ ಭಾಗವಸಲು ಆಯ್ಕೆಗೊಂಡಿರುತ್ತಾರೆ.

ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲಿನ ಎರಡನೇ ತರಗತಿಯ ವಿದ್ಯಾರ್ಥಿಯಾಗಿರುವ ಆರನ್ ರೀವ್ ಮೆಂಡಿಸ್ ಮಂಗಳೂರಿನ ಅರುಣ್ ಹಾಗೂ ಜೆನಿಫರ್ ಮೆಂಡಿಸ್ ದಂಪತಿಯ ಪುತ್ರನಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News