ಸಿ.ಪಿ.ಸಿ.ಆರ್.ಐ.ಯಲ್ಲಿ ಕೊಕ್ಕೋ ಅಂತರ್ ರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ

Update: 2019-05-20 17:17 GMT

ಮಂಗಳೂರು: ಏಷ್ಯಾ ಮತ್ತು ಪೆಸಿಫಿಕ್ ಖಂಡಗಳ ಕೊಕ್ಕೋ ತಳಿ ಸಂಶೋಧಕರ ಒಂದು ವಾರದ ಕಾರ್ಯಾಗಾರವನ್ನು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಎನ್. ಕುಮಾರ್ ನೆರವೇರಿಸಿದರು.

ಈ ಕಾರ್ಯಾಗಾರ ಮೇ ತಿಂಗಳ20 ರಿಂದ 25ರ ತನಕ ಕಾಸರಗೋಡಿನ ಸಿ.ಪಿ.ಸಿ.ಆರ್.ಐ.ಯಲ್ಲಿ ಜರಗುವುದು. ಉದ್ಘಾಟನೆಯನ್ನು ಮಾಡುತ್ತಾ ಡಾ. ಕುಮಾರ್ ಹೆಚ್ಚು ಇಳುವರಿ ನೀಡುವ ಹಾಗೂ ರೋಗ, ಕೀಟ ಪ್ರತಿರೋಧಕ ಹೈಬ್ರಿಡ್ಗಳ ಉತ್ಪಾದನೆಯ ಹಾಗೂ ಪರಸ್ಪರ ದೇಶಗಳ ಮಧ್ಯೆ ಇವುಗಳ ವಿನಿಮಯದ ಮೂಲಕ ಕೃಷಿಕರ ವಿತರಣೆಗಾಗಿ ಸ್ಥಳೀಯ ಗಿಡ ಉತ್ಪಾದನೆಯ ಪ್ರಾಮುಖ್ಯತೆಯನ್ನು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ವೆಂಕಟೇಶ್ ಹುಬ್ಬಳ್ಳಿ, ನಿರ್ದೇಶಕರು, ಗೇರು ಮತ್ತು ಕೊಕ್ಕೋ ಅಭಿವೃದ್ಧಿ ಮಂಡಳಿ ಇವರು ಅಂತರ್ ರಾಷ್ಟ್ರೀಯ ಸಹಭಾಗಿಗಳ ಗಮನಕ್ಕೆ ಭಾರತದ ಕೊಕ್ಕೋ ಬೀಜದ ಗುಣಮಟ್ಟ ಅತ್ಯುತ್ತಮವಾಗಿದ್ದರೂ, ಸಂಸ್ಕರಣಾ ರೀತಿಯ ಹೆಚ್ಚಳ ಅವಶ್ಯಕವಿದ್ದು, ಕೃಷಿಕರ ತರಬೇತಿಯ ಮೂಲಕ ಸಂಸ್ಕರಿಸಲ್ಪಟ್ಟ ಬೀಜದ ಗುಣಮಟ್ಟವನ್ನೂ ಉತ್ತಮಪಡಿಸಲಾಗುತ್ತಿದೆ ಎಂದರು.

ಮಾಸ್ಟರ್ ಚಾಕೊಲೇಟ್ನ ತಳಿ ಸಂಶೋಧನಾ ಪ್ರಬಂಧಕಿ ಡಾ. ಸ್ಮಿಲ್ಜಾ ಲಾಂಬಟರ್ ಇವರು ಏಷ್ಯಾ ಮತ್ತು ಪೆಸಿಫಿಕ್ ಖಂಡಗಳ ಕೊಕ್ಕೋ ತಳಿ ಸಂಶೋಧಕರ ಚಟುವಟಿಕೆಗಳ ಕುರಿತು  ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವವರಿಗೆ ತಿಳಿಯಪಡಿಸಿದರು.

ಶ್ರೀ ಶಂಕರನಾರಾಯಣ ಭಟ್, ಕ್ಯಾಂಪ್ಕೋ ಇವರು ಶುಭಾಶಂಸನೆಗೈಯುತ್ತಾ ಕ್ಯಾಂಪ್ಕೋ ಕಾರ್ಯ ಚಟುವಟಿಕೆಗಳ ಕುರಿತು ಕಾಯರ್ಾಗಾರದಲ್ಲಿ ಭಾಗವಹಿಸುತ್ತಿರುವವರಿಗೆ ತಿಳಿಯಪಡಿಸಿದರು. ಡಾ. ಹೆಚ್.ಪಿ. ಮಹೇಶ್ವರಪ್ಪ, ಪಾಮ್ಸ್ ಸಂಶೋಧನಾ ಪ್ರಾಜೆಕ್ಟ್ನ ಸಂಯೋಜಕರು ಹಾಗೂ ಡಾ. ಜೆ. ದಿಲೀಪ್ ಬಾಬು, ಆಂಧ್ರ ತೋಟಗಾರಿಕಾ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕರು ಶುಭಾಶಂಸನೆಗೈದರು.

ಕಾರ್ಯಾ ಗಾರದಲ್ಲಿ ಕೇರಳ ಕೃಷಿ ವಿಶ್ವವಿದ್ಯಾನಿಲಯ, ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯ, ಹಾಗೂ ಆಂಧ್ರ ತೋಟಗಾರಿಕಾ ವಿಶ್ವವಿದ್ಯಾನಿಲಯದ ಸಂಶೋಧಕರು, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮಲೇಶ್ಯಾ, ಫಿಲಿಪೈನ್ಸ್, ವಿಯೆಟ್ನಾಂ, ಅಮೆರಿಕಾ, ಬೆಲ್ಜಿಯಂ, ದೇಶಗಳಿಂದ 13  ಹಾಗೂ ಸಿ.ಪಿ.ಸಿ.ಆರ್.ಐ. ಯ ವಿಜ್ಞಾನಿಗಳು ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಭೂಗೋಳಿಕವಾಗಿ ಕೊಕ್ಕೋ ವಲಯದ ಸಾಮಥ್ರ್ಯ ಹಾಗೂ ದೌರ್ಬಲ್ಯಗಳ ಮೌಲ್ಯಮಾಪನಕ್ಕಾಗಿ ವಿವಿಧ ದೇಶಗಳ ಪ್ರಸ್ತುತ ಕಾರ್ಯಕ್ರಮಗಳ ಅವಲೋಕನ, ಕೊಕ್ಕೋಗೆ ಈಗ ಬಾಧಿಸುತ್ತಿರುವ ಕೀಟ - ರೋಗಗಳ ವಿವರಣೆ ಹಾಗೂ ಮುಂಬರುವ ಹವಾಮಾನದ ಏರುಪೇರಿನಿಂದ ರೋಗ - ಕೀಟ ಬಾಧೆಯಿಂದ ಸಂರಕ್ಷಣೆಗೆ ರೂಪುರೇಖೆಗಳ ತಯಾರಿ, ಸಾಮಾಜಿಕ ಹಾಗೂ ಆರ್ಥಿಕ ಸವಲತ್ತುಗಳು, ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟಯ ಸ್ತರದಲ್ಲಿ ಕಾರ್ಯವೈಖರಿ, ಸಂಶೋಧನಾ ಒಡಂಬಡಿಕೆಯ ಸಾಧ್ಯತೆಗಳು ಹಾಗೂ ಭಾರತದಲ್ಲಿ ಹೆಚ್ಚುವರಿ ಪರಿಶೀಲನೆಗಳ ಪ್ರಾರಂಭ ಇವುಗಳ ಕುರಿತಾದ ಚರ್ಚೆ ಹಾಗೂ ವಿಟ್ಲ ಸಿ.ಪಿ.ಸಿ.ಆರ್.ಐ.ಯ ಸಂಶೋಧನಾ ಕ್ಷೇತ್ರ, ಕಿದು ಸಿ.ಪಿ.ಸಿ.ಆರ್.ಐ.ಯ ಕೃಷಿಕ್ಷೇತ್ರ ಹಾಗೂ ಕ್ಯಾಂಪ್ಕೋ ಸಂಸ್ಕರಣಾ ಕ್ಷೇತ್ರಗಳಿಗೆ ಭೇಟಿ ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News