ದಿಲ್ಲಿ ಲೋಕಸಭಾ ಕ್ಷೇತ್ರಗಳ ಫಲಿತಾಂಶ 5-6 ಗಂಟೆ ವಿಳಂಬ ಸಾಧ್ಯತೆ: ಸಿಇಒ

Update: 2019-05-20 17:20 GMT

ಹೊಸದಿಲ್ಲಿ,ಮೇ 20: ದಿಲ್ಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರತಿಯೊಂದರ ವಿವಿಪ್ಯಾಟ್ ಎಣಿಕೆಗೆ ಹೆಚ್ಚಿನ ಸಮಯ ಬೇಕಾಗುವುದರಿಂದ ಮೇ 23ರಂದು ದಿಲ್ಲಿಯ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟಣೆಯಲ್ಲಿ ಸುಮಾರು 5ರಿಂದ 6 ಗಂಟೆಗಳ ವಿಳಂಬವಾಗಬಹುದು ಎಂದು ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್ ತಿಳಿಸಿದ್ದಾರೆ.

ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ಮತಎಣಿಕೆ ಮುಗಿದ ನಂತರ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದರಂತೆ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ 350 ವಿವಿಪ್ಯಾಟ್ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ಎವಿಎಂ ಜೊತೆ ತಾಳೆ ಹಾಕಬೇಕಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಸಿಂಗ್,ಪ್ರತಿ ವಿಧಾನಸಭಾ ಕ್ಷೇತ್ರವು 200 ಮತಗಟ್ಟೆಗಳನ್ನು ಹೊಂದಿವೆ ಮತ್ತು ವಿವಿಪ್ಯಾಟ್ ಎಣಿಕೆಗಾಗಿ ಐದು ಮತಗಟ್ಟೆಗಳನ್ನು ಯಾದ್ರಚ್ಛಿಕವಾಗಿ ಆಯ್ಕೆ ಮಾಡಲಾಗುವುದು. ಇದು ಔಪಚಾರಿಕ ಫಲಿತಾಂಶ ಪ್ರಕಟಣೆಯನ್ನು ವಿಳಂಬಗೊಳಿಸಲಿದೆ,ಆದರೆ ಫಲಿತಾಂಶದ ಮುನ್ಸೂಚನೆ ಅದಾಗಲೇ ದೊರಕಿರುತ್ತದೆ. ವಿಧ್ಯುಕ್ತವಾಗಿ ಫಲಿತಾಂಶ ಪ್ರಕಟಣೆಯು ಐದಾರು ಗಂಟೆಗಳಷ್ಟು ವಿಳಂಬಗೊಳ್ಳಲಿದೆ ಎಂದರು.

ದಿಲ್ಲಿ ಏಳು ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News