ಸಿರಿಯ: ರಶ್ಯದ ವಾಯುದಾಳಿಯಲ್ಲಿ ಮಕ್ಕಳು ಸೇರಿ 10 ಮಂದಿ ಮೃತ್ಯು

Update: 2019-05-20 18:22 GMT
ಫೋಟೊ ಕೃಪೆ-Thinkstock

ಕಫ್ರನ್‌ಬೇಲ್ (ಸಿರಿಯ), ಮೇ 20: ಸಿರಿಯದ ಮಿತ್ರ ದೇಶ ರಶ್ಯವು ವಾಯುವ್ಯದ ಬಂಡುಕೋರರ ನೆಲೆಯೊಂದರ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ ಕನಿಷ್ಠ 10 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಸೋಮವಾರ ಹೇಳಿದೆ.

ರವಿವಾರ ರಾತ್ರಿ ಭೀಕರ ವಾಯು ದಾಳಿ ನಡೆದ ಬಳಿಕ, ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದ ಅಂಚಿನಲ್ಲಿ ಸೋಮವಾರ ಸರಕಾರಿ ಪಡೆಗಳು ಮತ್ತು ಬಂಡುಕೋರರ ನಡುವೆ ಸಂಘರ್ಷ ನಡೆದಿದೆ.

ಇದ್ಲಿಬ್ ಪ್ರಾಂತದ ಕಫ್ರನ್‌ಬೇಲ್ ಪಟ್ಟಣದಲ್ಲಿ ರವಿವಾರ ರಾತ್ರಿ ನಡೆದ ವಾಯು ದಾಳಿಯಲ್ಲಿ ಐವರು ಮಕ್ಕಳು, ನಾಲ್ವರು ಮಹಿಳೆಯರು ಮತ್ತು ಓರ್ವ ಪುರುಷ ಮೃತಪಟ್ಟಿದ್ದಾರೆ ಎಂದು ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News