ಪೆಸಿಫಿಕ್ ಗೇಮ್ಸ್ ಬಿಲ್ಲುಗಾರಿಕೆ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡ ಪ್ರಧಾನಿ!

Update: 2019-05-22 11:07 GMT

ಏಪಿಯಾ, ಮೇ 22: ಸಮೋವ ದೇಶದ ಪ್ರಧಾನಿ ತುಯಿಲೇಪಾ ಅಯೋನೋ ಸೈಲೇಲೆ ತಮ್ಮ 74ನೇ ವಯಸ್ಸಿನಲ್ಲಿ  ಪೆಸಿಫಿಕ್ ಗೇಮ್ಸ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಕಳೆದ ವಾರಾಂತ್ಯ ನಡೆದ ಅರ್ಹತಾ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಅವರು ರಾಷ್ಟ್ರೀಯ ಬಿಲ್ಲುಗಾರಿಕೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಸಮೋವಾ ದೇಶ ಪೆಸಿಫಿಕ್ ಗೇಮ್ಸ್ ಅನ್ನು 12 ವರ್ಷಗಳ ಹಿಂದೆ ಆಯೋಜಿಸಿದ್ದಾಗ ಭಾಗವಹಿಸಿದ್ದ ಅವರು ಆಗ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಅದಕ್ಕಿಂತಲೂ ಉತ್ತಮ ನಿರ್ವಹಣೆ ತೋರಬೇಕೆಂದು ಕಂಕಣಬದ್ಧರಾಗಿರುವ ಅವರು ತಮ್ಮ ತಂಡದ ಇತರ ಸದಸ್ಯರೊಂದಿಗೆ  ಪ್ರಾಕ್ಟೀಸಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪೆಸಿಫಿಕ್ ಗೇಮ್ಸ್  ಜುಲೈ 7ರಿಂದ 20ರ ತನಕ ನಡೆಯಲಿದ್ದು  ಒಟ್ಟು 27 ಕ್ರೀಡೆಗಳಲ್ಲಿ ಪೆಸಿಫಿಕ್ ಸಾಗರದ ಸುತ್ತಮುತ್ತಲಿನ ದೇಶಗಳ ಅಥ್ಲೀಟುಗಳು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News