ಸಿಡ್ನಿ, ಯುಕೆಯಲ್ಲಿಯೂ ಪಟ್ಲ ಫೌಂಡೇಶನ್: ಸತೀಶ್ ಶೆಟ್ಟಿ

Update: 2019-05-22 12:13 GMT

ಮಂಗಳೂರು, ಮೇ 22: ಅಮೇರಿಕದಲ್ಲಿ ಪಟ್ಲ ಫೌಂಡೇಶನ್ ಸ್ಥಾಪನೆಯಾಗುವ ಸಂಭ್ರಮದಲ್ಲಿವಾಗಲೇ ಆಸ್ಟ್ರೇಲಿಯಾದ ಸಿಡ್ನಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿಯೂ ಪಟ್ಲ ಫೌಂಡೇಶನ್ ಘಟಕ ಕಾರ್ಯಾರಂಭಿಸಲಿದೆ ಎಂದು ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಹೇಳಿದರು.

ಪುತ್ತುಮುಡಿ ಸೌಧದಲ್ಲಿ ಮಂಗಳವಾರ ಆಯೋಜನೆಗೊಂಡ ಅಮೆರಿಕದಲ್ಲಿ ಜೂನ್‌ನಲ್ಲಿ ನಡೆಯುವ ಪಟ್ಲ ಘಟಕ ಉದ್ಘಾಟನೆ ಕಾರ್ಯಕ್ರಮದ ಸಮಾಲೋಚನೆ ಸಭೆ ಮತ್ತು ಜೂ.2ರಂದು ಅಡ್ಯಾರ್‌ಗಾರ್ಡನ್‌ನಲ್ಲಿ ನಡೆಯುವ ಪಟ್ಲ ಸಂಭ್ರಮದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಬಡ ಕಲಾವಿದರಿಗಾಗಿ 100 ಮನೆ ನಿರ್ಮಿಸುವ ಯೋಜನೆಗೆ ಕಿನ್ನಿಗೋಳಿ ಬಳಿ 11 ಎಕರೆ ಜಾಗ ಖರೀದಿಸಲಾಗಿದೆ ಎಂದು ಸತೀಶ್ ಶೆಟ್ಟಿ ಹೇಳಿದರು.

ಪ್ರಧಾನ ಕಾಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುಧೇಶ್ ರೈ, ರವಿ ಶೆಟ್ಟಿ ಅಶೋಕನಗರ, ಪ್ರಧಾನ ಸಂಚಾಲಕ ನಿತ್ಯಾನಂದ ಶೆಟ್ಟಿ, ಸುಧಾಕರ ಪೂಂಜಾ, ಜಯಶೀಲ ಅಡ್ಯಂತಾಯ, ಮಂಗಳೂರು ನಗರ ಘಟಕ ಅಧ್ಯಕ್ಷ ಪ್ರದೀಪ್ ಆಳ್ವ, ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರ್, ಮಹಿಳಾ ಘಟಕ ಗೌರವಾಧ್ಯಕ್ಷ ಆರತಿ ಆಳ್ವ ಸಭೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News