ಲ್ಯುಕೇಮಿಯ ಚಿಕಿತ್ಸೆ: ನೆರವಿಗಾಗಿ ಮನವಿ

Update: 2019-05-22 12:16 GMT

ಮಂಗಳೂರು, ಮೇ 22: ಪದವಿನಂಗಡಿ ಪೆರ್ಲಗುರಿ ನಿವಾಸಿ, ಡೊಂಗರಕೇರಿ ಕೆನರಾ ಸಿಬಿಎಸ್‌ಸಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಬಿ. ಅವರು ಲ್ಯುಕೇಮಿಯ (ರಕ್ತಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ನೆರವು ಕೋರಿ ಮನವಿ ಮಾಡಿದ್ದಾರೆ.

ಫೆಬ್ರವರಿಯಲ್ಲಿ ಒಂದು ತಿಂಗಳ ಚಿಕಿತ್ಸೆ, ಕೀಮೋಥೆರಪಿ ಮಾಡಿದ್ದು, ಒಂಬತ್ತು ಲಕ್ಷ ರೂ. ಈವರೆಗೆ ವೆಚ್ಚವಾಗಿದೆ. ಮನೆಯಲ್ಲಿ ವಯಸ್ಸಾದ ತಂದೆ, ತಾಯಿ, ಪತ್ನಿ, ಆರು ಮತ್ತು ಒಂದು ವರ್ಷ ವಯಸ್ಸಿನ ಮಕ್ಕಳಿದ್ದು ಚಿಕಿತ್ಸೆ ಜತೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಶಾಲಾಡಳಿತ ಮಂಡಳಿ, ಸಹೋದ್ಯೋಗಿಗಳು, ವಿದ್ಯಾರ್ಥಿಗಳ ಹೆತ್ತವರು ನೆರವು ನೀಡಿದ್ದಾರೆ. ಕ್ಯಾಲಿಕಟ್‌ನ ಡಾ.ಗೋವಿಂದ ಇರಿಯಾಟ್ ಬಳಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದ್ದು, ಇದಕ್ಕಾಗಿ 25ರಿಂದ 30 ಲಕ್ಷ ರೂ. ಬೇಕಾಗಿದೆ. ದುಬಾರಿ ವೆಚ್ಚ ಭರಿಸುವುದು ಕಷ್ಟವಾಗಲಿದ್ದು, ಸಹೃದಯರು ಚಿಕಿತ್ಸೆಗೆ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ.

ನೆರವು ನೀಡಲು ಬಯಸುವವರು ಕೆನರಾ ಬ್ಯಾಂಕ್ ರಾಮಭವನ ಕಾಂಪ್ಲೆಕ್ಸ್, ಅಕೌಂಟ್ ನಂಬರ್ 1978101004083ಗೆ ಹಣ ಜಮಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸುರೇಂದ್ರ ಬಿ. (9448500845) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News