ಕಾಸರಗೋಡು: ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ಮತ ಎಣಿಕೆ

Update: 2019-05-22 12:26 GMT

ಕಾಸರಗೋಡು :  ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಪಡನ್ನಕ್ಕಾಡ್  ನೆಹರೂ ಕಾಲೇಜಿನಲ್ಲಿ ನಡೆಯಲಿದೆ. ಒಟ್ಟು 15 ಸುತ್ತು ಮತ ಎಣಿಕೆ ನಡೆಯಲಿದ್ದು , ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಲಭಿಸಲಿದೆ.

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದ್ದು, ಮೊದಲು ಅಂಚೆ ಮತಗಳು ಮತ್ತು ಆಯ್ದ ವಿವಿ ಪ್ಯಾಟ್ ಸ್ಲಿಪ್ ಗಳ ಎಣಿಕೆ ನಡೆಯಲಿದೆ.  ಬಳಿಕ ಮತಯಂತ್ರಗಳ ಎಣಿಕಾ ಕಾರ್ಯ ನಡೆಯಲಿದೆ.

ಒಂದು ಸುತ್ತಿನಲ್ಲಿ  89 ಮತಗಟ್ಟೆಗಳ ಎಣಿಕೆ ಮಾಡಲಾಗುವುದು. ೧೫ ಸುತ್ತು ಮತ ಎಣಿಕೆ ನಡೆಯಲಿದೆ. ವಿ ವಿ ಪ್ಯಾಟ್ ಸ್ಲಿಪ್ ಗಳನ್ನು  ಎಣಿಕೆ ಮಾಡಲಿರುವುದರಿಂದ ಮಧ್ಯಾಹ್ನದ ವೇಳೆಗೆಷ್ಟೇ ಅಧಿಕೃತ ಫಲಿತಾಂಶ ಹೊರಬೀಳಲಿದೆ.

ಎ. 23 ರಂದು ನಡೆದ ಚುನಾವಣೆಯಲ್ಲಿ 80.57 ಶೇಕಡಾ ಮತದಾನವಾಗಿತ್ತು.    ನಕಲಿ ಮತದಾನ  ನಡೆದ ಹಿನ್ನೆಲೆಯಲ್ಲಿ ನಾಲ್ಕು ಮತಗಟ್ಟೆಗಳಲ್ಲಿ ಮರುಮತದಾನ ನಡೆದಿತ್ತು.

ಮಂಜೇಶ್ವರ, ಕಾಸರಗೋಡು, ಕಾಞಂಗಾಡ್ ವಿಧಾನಸಭಾ  ಕ್ಷೇತ್ರಗಳ ತಲಾ 14  ಮೇಜುಗಳು ,. ಉದುಮಾಕ್ಕೆ 10, ತ್ರಿಕರಿಪುರಕ್ಕೆ 13, ಪಯ್ಯನ್ನೂರು, ಕಲ್ಯಾಶೇರಿಗೆಗಳಿಗೆ ತಲಾ 12 ಮೇಜುಗಳಿವೆ. ಈ ಮೇಜುಗಳ ನಿಗಾದ ಹೊಣೆ ಉಪಚುನಾವಣಾಧಿಕಾರಿಗಳಿಗೆ ನೀಡಲಾಗಿದೆ. ಪ್ರತಿ ಗಣನೆ ಮೇಜಿನಲ್ಲೂ ಕೌಂಟಿಂಗ್ ಸೂಪರ್ ವೈಸರ್ ಗಳು, ಕೌಂಟಿಂಗ್ ಅಸಿಸ್ಟೆಂಟ್ ಗಳು, ಮೈಕ್ರೋಒಬ್ಸರ್ ವರ್ ಗಳ ನ್ನು ನೇಮಿಸಲಾಗಿದೆ .

ಮೈಕ್ರೋ ಒಬ್ಸರ್ ವರ್ ಗಳ ನಿಗಾದಲ್ಲಿಒ ಕೌಂಟಿಂಗ್ ಸೂಪರ್ ವೈಸರ್ ಮತ್ತು ಕೌಂಟಿಂಗ್ ಅಸಿಸ್ಟೆಂಟ್ ಗಳು ಪ್ರತಿ ಮೇಜಿನಲ್ಲಿ ಮತಗಳ ಎಣಿಕೆ ನಡೆಸಲಿದ್ದಾರೆ. ಪ್ರತಿ ಗಣನೆಯ ಮೇಜಿನ ವ್ಯಾಪ್ತಿಯಲ್ಲಿ ಆಯಾ ಅಭ್ಯರ್ಥಿಗಳ ಏಜೆಂಟರು ಇರುವರು. ಅಂಚೆ ಮತಗಳ ಗಣನೆ ಜಿಲ್ಲಾಧಿಕಾರಿ ಅವರ ಮೇಲ್ನೋಟದಲ್ಲಿ ನಡೆಯಲಿದೆ. ಇದಕ್ಕಾಗಿ ಸಹಾಯಕ ಜಿಲ್ಲಾಧಿಕಾರಿಯ ಶ್ರೇಣಿಯಲ್ಲಿರುವ 6 ಎ.ಆರ್.ಒ.ಗಳನ್ನು ನೇಮಿಸಲಾಗಿದೆ. ಇಲೆಕ್ಟ್ರಾನಿಕಲಿ ಟ್ರಾನ್ಸ್ ಮಿಟೆಡ್ ಪೋಸ್ಟಲ್ ವೋಟ್ ಗಳು, ಸ್ಕ್ಯಾನ್ ನಡೆಸಿ ಮತ ಎಣಿಕೆ  ನಡೆಸಲು 12 ಮೇಜುಗಳನ್ನು ಸಿದ್ಧಪಡಿಸಲಾಗಿದೆ. ಇವುಗಳಲ್ಲಿ16 ತಂತ್ರಜ್ಞರು ಇರುವರು. ಪ್ರತಿ ವಿಧಾನಸಭೆ ಕ್ಷೇತ್ರದ 5 ಮತಗಟ್ಟೆಗಳನ್ನು ಆಯ್ದು , ಈ ಬೂತ್ ಗಳ ವಿವಿಪಾಟ್ ಸ್ಲಿಪ್ ಗಳನ್ನು ಗಣನೆ ಮಾಡಿ, ಮತಯಂತ್ರದ ಫಲಿತಾಂಶವನ್ನು ಹೋಲಿಸಿ ನೋಡಲಾಗುವುದು.

ಬೆಳಗ್ಗೆ 6 ಗಂಟೆಗೆ ಅಭ್ಯರ್ಥಿಗಳ ಏಜೆಂಟರು ಮತ ಎಣಿಕಾ  ಕೇಂದ್ರವಾಗಿರುವ ಪಡನ್ನಕ್ಕಾಡ್ ನೆಹರೂ ಕಾಲೇಜಿಗೆ  ತಲಪಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.  ಬಿಗಿ ಸುರಕ್ಷಾ ತಪಾಸಣೆಯ ನಂತರ ಇವರಿಗೆ ಕೇಂದ್ರದೊಳಗೆ ಪ್ರವೇಶಾತಿ ನೀಡಲಾಗುವುದು. ಮತಗಣನೆ ಕೇಂದ್ರದಲ್ಲಿ ಮೊಬೈಲ್ ಫೋನ್  ಬಳಸುವಂತಿಲ್ಲ. ಮಂಜೇಶ್ವರ, ಕಾಸರಗೋಡು, ಉದುಮಾ, ಕಾಞಂಗಾಡ್, ತ್ರಿಕರಿಪುರ,ಕಲ್ಯಾಶೇರಿ, ಪಯ್ಯನ್ನೂರು ವಿಧಾನಸಭೆ ಕ್ಷೇತ್ರಗಳಿಗಾಗಿ ಪ್ರತ್ಯೇಕ ಮತಗಣನೆ ಕೊಠಡಿಗಳಲ್ಲಿ ಗಣನೆಯ ಮೇಜುಗಳ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರ ಗಳ ತಲಾ 5  ಮತಗಟ್ಟೆಗಳ  ವಿವಿಪಾಟ್ ಗಳ ಸ್ಲಿಪ್ ಗಳನ್ನು ಎಣಿಕೆ ಮಾಡಲಾಗುವುದು.

1. ಪ್ರತಿ ವಿಧಾನಸಭಾ  ಕ್ಷೇತ್ರಗಳಿಂದ ಚೀಟಿ ಎತ್ತುವ ಮೂಲಕ ಆಯ್ಕೆಮಾಡಿದ 5 ಮತಗಟ್ಟೆಗಳ ವಿವಿಪಾಟ್ ಸ್ಲಿಪ್ ಗಳ ಎಣಿಕೆ ನಡೆಯಲಿದೆ.

2.ಇವಿಎಂ ನ ಡಿಸ್ ಪ್ಲೇ ಸ್ಪಷ್ಟವಾಗಿ ಕಾಣದಿದ್ದರೂ ವಿವಿಪಾಟ್ ನ ಎಣಿಕೆ  ನಡೆಸಲಾಗುವುದು.

3. ಮತದಾನಕ್ಕೆ ಮೊದಲು ನಡೆಸಿದ ಮೋಕ್ ಪೋಲ್ ರದ್ದುಗೊಳಿಸದೇ ಇರುವ ಇವಿಎಂ ನ ವಿವಿಪಾಟ್ ಸ್ಲಿಪ್ ಎಣಿಕೆ  ಮಾಡಲಾಗುವುದು. 

4. ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ ಇವಿಎಂ ಕ್ಲೋಸ್ ಬಟನ್ ಬಳಸದೇ ಸೀಲ್ ನಡೆಸಿದ ಇ ವಿ ಎಂ ಗಳ ವಿವಿಪಾಟ್ ಸ್ಲಿಪ್ ಎಣಿಕೆ  ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News