ತುಂಬೆ, ಹಿದಾಯತುಲ್ ಇಸ್ಲಾಮ್ ಮದರಸ ಶೇ. 100 ಫಲಿತಾಂಶ

Update: 2019-05-22 15:12 GMT

ಫರಂಗಿಪೇಟೆ, ಮೇ 22: ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಅಂಗೀಕೃತ ಹಿದಾಯತುಲ್ ಇಸ್ಲಾಮ್ ಮದರಸ ತುಂಬೆಗೆ  ಐದನೇ ಮತ್ತು ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಶೇ100 ಫಲಿತಾಂಶ ಪಡೆದಿದೆ.

ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 21 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ ಪ್ರಥಮ ಶ್ರೇಣಿಯಲ್ಲಿ 9, ಡಿಸ್ಟಿಂಕ್ಷನ್ ನಲ್ಲಿ 10, ದ್ವಿತೀಯ ಶ್ರೇಣಿಯಲ್ಲಿ 2 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಐದನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಪ್ರಥಮ ಶ್ರೇಣಿಯಲ್ಲಿ 5, ದ್ವಿತೀಯ ಶ್ರೇಣಿಯಲ್ಲಿ 5, ತೃತೀಯ ಶ್ರೇಣಿಯಲ್ಲಿ 27 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಅಬ್ದುಲ್ ಸಮದ್ ಮತ್ತು ಸಕೀನ ದಂಪತಿಯ ಪುತ್ರಿ ಸುಮಯ್ಯ ಏಳನೇ ತರಗತಿಯಲ್ಲಿ (438) ಅಧಿಕ ಅಂಕಗಳಿಸಿದ್ದಾರೆ, ಶೇ 100 ಫಲಿತಾಂಶ ಬರಲು ಪ್ರಯತ್ನಿಸಿದ ಮದರಸದ ಸದರ್ ಉಸ್ತಾದ್ ಯೂಸುಫ್ ಮುಸ್ಲಿಯಾರ್ ಸಹ ಅದ್ಯಾಪಕರಿಗೆ ಮಸೀದಿ ಆಡಳಿತ ಸಮಿತಿ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ ಎಂದು ಮಸೀದಿ ಆಡಳಿತ ಸಮಿತಿ  ಪ್ರ. ಕಾರ್ಯದರ್ಶಿ ಮೂಸಬ್ಬ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News